Header Ads
Breaking News

ಮುಂಬಯಿಯ ಬಂಟರ ಭವನದಲ್ಲಿ ಗೋಪಾಲ್ ಸಿ.ಶೆಟ್ಟಿ,ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರಿಗೆ ಸನ್ಮಾನ

ಮುಂಬಯಿಯ ಬೋರಿವಿಲಿ ಲೋಕಸಭಾ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಜಯಗಳಿಸಿದ ಸಂಸದ ಗೋಪಾಲ್ ಶೆಟ್ಟಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಂಸ್ಥೆಗೆ ನೂತನ ನಿರ್ದೇಶಕರಾಗಿ ಸೇರ್ಪಡೆಗೊಂಡ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರನ್ನು ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು.

ಮುಂಬಯಿಯ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಂಬಯಿ ಬೋರಿವಿಲಿ ಲೋಕಸಭಾ ಕ್ಷೇತ್ರದಿಂದ ದ್ವಿತೀಯ ಬಾರಿಗೆ ಜಯಗಳಿಸಿ ಬಂಟ ಸಮುದಾಯದ ಮಾಣಿಕ್ಯ ಎಂದೆಣಿಸಿದ ಸಂಸದ ಗೋಪಾಲ್ ಸಿ.ಶೆಟ್ಟಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಂಸ್ಥೆಗೆ ನೂತನ ನಿರ್ದೇಶಕರಾಗಿ ಸೇರ್ಪಡೆಗೊಂಡ ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತಿತಿಯ ಹಾಸ್ಪಿಟ್ಯಾಲಿಟಿ ಲೀಡರ್’ಸ್ ಇಂಡಸ್ಟೀ ಚಾಯ್ಸ್ ಅವಾರ್ಡ್’ ಪ್ರಶಸ್ತಿ ಪುರಸ್ಕೃತ ಎಂಆರ್‌ಜಿ ಸಮೂಹದ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಗೌರವ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತು ಒಕ್ಕೂಟದ ಪೋಷಕ ಸದಸ್ಯರೂ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಉಪಸ್ಥಿತರಿದ್ದು ಇಂದಿಲ್ಲಿ ಒಕ್ಕೂಟದ ಪರವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಶಾಸಕ ಸಿ.ಟಿ ರವಿ, ಸುಧೀರ್ ವಿ.ಶೆಟ್ಟಿ, ಸುಧಾಕರ್ ಎಸ್.ಹೆಗ್ಡೆ, ಡಾ| ಸುರೇಂದ್ರ ವಿ.ಶೆಟ್ಟಿ, ಆದಾಯ ತೆರಿಗೆ ಇಲಾಖಾ ಸಹಾಯಕ ಆಯುಕ್ತೆ ನಿವ್ಯಾ ಪಿ.ಶೆಟ್ಟಿ (ಐಆರ್‌ಎಸ್), ಬಂಟ್ಸ್ ಸಂಘ ಮುಂಬಯಿ ಇದರ ಪದಾಧಿಕಾರಿಗಳಾದ ಚಂದ್ರಹಾಸ ಕೆ.ಶೆಟ್ಟಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *