Header Ads
Header Ads
Breaking News

ಕೃಷಿ ಉದ್ದೇಶಕ್ಕಾಗಿ ಡ್ರೋನ್ ಬಳಕೆ : ಮುಕ್ಕ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮುಕ್ಕ ಶ್ರೀನಿವಾಸ್ ಇಂಜಿನಿಯರೊ೦ಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಂದ ತಮ್ಮ ಅಂತಿಮ ವರ್ಷದ ಯೋಜನೆಯ ಭಾಗವಾಗಿ ಕೃಷಿ ಉದ್ದೇಶಕ್ಕಾಗಿ ಡ್ರೋನ್ ನಿರ್ಮಿಸಿದ್ದಾರೆ. ಈ ಯೋಜನೆಯಲ್ಲಿ ಕೃಷಿ ಅನ್ವಯಗಳಿಗೆ ಮುಖ್ಯವಾಗಿ ಬೆಳೆಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಲು ಮತ್ತು ಬೆಳೆಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಆನ್ ಬೋರ್ಡು ಕ್ಯಾಮೆರಾ ಮತ್ತು ಗಿಂಬಲ್ ಹೊಂದಿರುವ ಅನ್‌ಮೇನ್‌ಡ್ ಏರಿಯಲ್ ವೈಕಲ್ಸ್ ಆಧಾರಿತ ಮೂಲ ಮಾದರಿಯ ಡ್ರೋನ್‌ನ್ನು ನಿರ್ಮಿಸಿದ್ದಾರೆ. 

ದೊಡ್ಡ ಪ್ರಮಾಣದ ಉತ್ಪಾದನೆಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಅತ್ಯಗತ್ಯ. ಇತ್ತಿಚಿನ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಮಿಕರನ್ನು ರೋಬೋಟ್‌ಗಳಂತಹ ಬುಧ್ಧಿವಂತ ಯಂತ್ರಗಳೊದಿಗೆ ಬದಲಾಯಿಸುವ ಮೂಲಕ ಕೃಷಿಯ ದಕ್ಷತೆ ಮತ್ತು ಉತ್ಪಾದಕತೆಯನ್ನು ಸುಧಾರಿಸುವುದು ಬಹಳ ಮುಖ್ಯ. ಈ ಯೋಜನೆಯು ಕೀಟಗಳ ಉಪಸ್ಥಿತಿಯನ್ನು ಪತ್ತೆ ಮಾಡುವುದು, ಯೂರಿಯ ಸಿಂಪಡಿಸುವಿದು, ರಸಗೊಬ್ಬರಗಳನ್ನು ಸಿಂಪಡಿಸುವುದು ಮುಂತಾದ ಕೃಷಿಯ ವಿವಿಧ ಕಾರ್ಯಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆಲ್ಡಿನ್ ಸಿಕ್ವೇರಾ, ಅಕ್ಷಯ್.ಪಿ. ರಾವ್, ಲಿಕಿತ್ ಜೆ. ದೇವಾಡಿಗ, ಪ್ರಸಾದ್ ಕಾಮತ್, ಓಂಕಾರ್ ವರೇಕಾರ್, ರಾಘವೇಂದ್ರ, ಮನೀಶ್ ಶೆಟ್ಟಿ , ಸತೀಶ್ ಶೆಟ್ಟಿ ರವರು ಸಹಾಯಕ ಪ್ರಾದ್ಯಾಪಕರಾದ ರಾಘವೇಂದ್ರ ಈ ಎಚ್ ಇವರ ಮಾರ್ಗದರ್ಶನದಲ್ಲಿ ಈ ಮಾದರಿಯನ್ನು ಮಾಡಿರುತ್ತಾರೆ.

Related posts

Leave a Reply

Your email address will not be published. Required fields are marked *