Header Ads
Header Ads
Breaking News

ಮುಕ್ಕ, ಸುರತ್ಕಲ್ ಕಡಲಭಾಗದಲ್ಲಿ ವ್ಯಾಪಕ ಕಡಲ್ಕೊರೆತ :ಆತಂಕದಲ್ಲಿ ಕಡಲ ತಡಿಯ ನಿವಾಸಿಗಳು

ಸುರತ್ಕಲ್, ಮುಕ್ಕ ಪರಿಸರದ ಕಡಲ ಭಾಗದಲ್ಲಿ ವ್ಯಾಪಕ ರೀತಿಯ ಕಡಲ್ಕೊರೆತ ಉ೦ಟಾಗಿದ್ದು 22 ವರ್ಷಗಳ ಬಳಿಕ ಈ ಸಲ ವ್ಯಾಪಕ ಕಡಲ್ಕೊರೆತ ಕಾಣಿಸಿದ್ದು ಕಡಲ ತೀರದಲ್ಲಿ ಹಾಕಿರುವ ತಡೆಗೋಡೆ ಕಲ್ಲನ್ನು ಕೂಡಾ ಕಡಲು ಆಪೋಶನ ಮಾಡುತ್ತಾ ಬಂದಿದೆ. ತಡೆಗೋಡೆ ಕಲ್ಲುಗಳು ಕೂಡಾ ಕಡಲ ತಡಿಯನ್ನು ಸೇರುತ್ತಿದ್ದು ಕಡಲ ತೀರದ ನಿವಾಸಿಗಳಿಗೆ ಆತಂಕದಿಂದ ದಿನದೂಡುವಂತಾಗಿದೆ.

ಕಡಲ ತೀರದಲ್ಲಿ ಕಡಲ್ಕೊರೆತ ಉ೦ಟಾಗದಂತೆ ಬೃಹತ್ ಕಲ್ಲುಗಳನ್ನು ಹೆಚ್ಚಾಗಿ ಕಡಲ್ಕೊರೆತ ಉ೦ಟಾಗುವ ಭಾಗದಲ್ಲಿ ಹಾಕಲಾಗಿದ್ದು ಆದರೆ ಇದೀಗ ತಡೆಗೋಡೆಯ ಮುಂಭಾಗ ಹಾಕಿರುವ ಚಪ್ಪಡಿ ಕಲ್ಲುಗಳನ್ನು ಕೂಡಾ ಕಡಲು ತನ್ನತ್ತ ಸೆಳೆದುಕೊಂಡು ಇನ್ನೂ ಮುನ್ನುಗ್ಗಿ ಬರುತ್ತಿವೆ. ಗಾಳಿ ಹಾಗೂ ಮಳೆ ಹೆಚ್ಚಾಗಿ ಬಂದಾಗ ಮಾತ್ರವೇ ಕಡಲಬ್ಬರ ಹೆಚ್ಚಾಗುತ್ತಿದ್ದು ಆದರೆ ಗಾಳಿ, ಮಳೆ ಅಷ್ಟೂ ಪ್ರಮಾಣದಲ್ಲಿ ಇಲ್ಲದಿದ್ದರೂ ಕೂಡಾ ಈ ರೀತಿಯ ಕಡಲ್ಕೊರೆತವನ್ನು ಎಂದಿಗೂ ಕಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಮುಕ್ಕ ಪರಿಸರದಲ್ಲಿ ಕಡಲ ತೀರದ ಬಳಿಯೇ ಬಾಡಿಗೆ ಕುಟುಂಬಗಳಿದ್ದು ತೀವ್ರ ಕಡಲ್ಕೊರೆತದ ಹಿನ್ನಲೆಯಲ್ಲಿ ಮನೆಯನ್ನು ಬಿಟ್ಟು ಸ್ಥಳಾಂತರಗೊಂಡಿದ್ದಾರೆ. ಮನೆಯ ಹಿಂಬಾಗದಲ್ಲಿ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ಹೀಗೆಯೇ ಕಡಲು ಮುಂದೆ ಬಂದರೆ ಮನೆಯು ಕೂಡಾ ಕಡಲ ಪಾಲಾಗುತ್ತದೆ. ಈ ಭಾಗದಲ್ಲಿ ಹಾಕಿರುವ ತಡೆಗೋಡೆ ಕಲ್ಲುಗಳು ಕೂಡಾ ಕಡಲ ಪಾಲಾಗುತ್ತಿದೆ. ತೆಂಗಿನ ಮರಗಳು ಕೂಡಾ ಅಪಾಯಕಾರಿ ಸ್ಥಿತಿಯಲ್ಲಿವೆ. ಯಾವಾಗ ಏನು ಸಂಭವಿಸಬಹುದು ಎಂದು ತಿಳಿಯದೇ ಇಲ್ಲಿನ ನಿವಾಸಿಗಳು ಆತಂಕದಲ್ಲಿ ದಿನದೂಡುತ್ತಿದ್ದಾರೆ.

Related posts

Leave a Reply

Your email address will not be published. Required fields are marked *