Header Ads
Header Ads
Breaking News

ಮುಚ್ಚಿದ ಸೂಟರ್‌ಪೇಟೆ ಕನಕರಬೆಟ್ಟು ರೈಲ್ವೇಗೇಟ್:ಸ್ಥಳೀಯರಿಗೆ ಹೊಸ ಸಮಸ್ಯೆಯನ್ನು ಸೃಷ್ಟಿಸಿದ ರೈಲ್ವೇಗೇಟ್

ಮಂಗಳೂರಿನ ಸೂಟರ್‌ಪೇಟೆ ಕನಕರಬೆಟ್ಟು ಪ್ರದೇಶದ ಜನರಿಗೆ ಈವರೆಗೆ ರೈಲ್ವೇಗೇಟ್‌ನಿಂದ ಸಮಸ್ಯೆ ಉಂಟಾಗ್ತಾ ಇತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ಇದೀಗ ರೈಲ್ವೇಗೇಟ್‌ನ್ನು ಮುಚ್ಚಿ, ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಈ ರಸ್ತೆ ಇದೀಗ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ರಸ್ತೆಯು ಸಮರ್ಪಕವಾಗಿಲ್ಲ, ವೈಜ್ಞಾನಿಕವಾಗಿಲ್ಲ ಎನ್ನುವ ಆರೋಪ ಇದೀಗ ಸ್ಥಳೀಯರಿಂದ ಕೇಳಿಬರುತ್ತಿದೆ.

ಮಂಗಳೂರಿನ ವೆಲೆನ್ಸಿಯಾ ಸೂಟರ್‌ಪೇಟೆ ಕನಕರಬೆಟ್ಟು ಪ್ರದೇಶದಲ್ಲಿ ಜನರು ಇತ್ತೀಚಿನವರೆಗೆ ಇಲ್ಲಿದ್ದ ರೈಲ್ವೇ ಗೇಟ್‌ನಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಇಲ್ಲಿರುವ ರೈಲ್ವೇಗೇಟ್‌ಗೆ ಒಂದು ಮುಕ್ತಿ ಒದಗಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿತ್ತು. ಆದರೆ ಈ ಸಮಸ್ಯೆಗೆ ದೊರೆತ ಪರಿಹಾರ ಈ ಭಾಗದ ಜನತೆಗೆ ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಮಂಗಳೂರಿನ ವೆಲೆನ್ಸಿಯಾ ಸೂಟರ್‌ಪೇಟೆ ಪ್ರದೇಶವು ನೂರಾರು ಮನೆಗಳನ್ನು ಹೊಂದಿದೆ. ಈ ಭಾಗದಲ್ಲಿ ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ಒಂದಿದ್ದು, ಇದರಿಂದಾಗಿ ಸ್ಥಳೀಯ ಜನರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು. ಹೀಗಾಗಿ ಈ ರೈಲ್ವೇ ಗೇಟ್ ಸಮಸ್ಯೆಗೊಂದು ಮುಕ್ತಿ ಒದಗಿಸಬೇಕು ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಇದೀಗ ಕುಡುಪಾಡಿ ಮೂಲಕ ಕಚ್ಛಾ ರಸ್ತೆ ನಿರ್ಮಿಸಿ ಕೊಡಲಾಗಿದೆ. ದಿನನಿತ್ಯ ಓಡಾಡುವ ಮಂದಿಗೆ ಸಾಕಷ್ಟು ಸಮಸ್ಯೆUಳು ಉಂಟಾಗಿದೆ. ಆಂಬುಲೆನ್ಸ್ ಕೂಡ ಬರುವ ಹಾಗಿಲ್ಲ. ಮಹಿಳೆಯರು ಕೂಡ ಓಡಾಡುವ ಹಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಸ್ಥಳೀಯರಿಗೆ ಮಾಹಿತಿ ನೀಡದೆ ಗೇಟ್ ಮುಚ್ಚಲಾಗಿದೆ. ಇದರಿಂದಾಗಿ ಸ್ಥಳೀಯ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನಿರ್ಮಿಸಲಾಗಿರುವ ಅಂಡರ್‌ಪಾಸ್ ಮೂಲಕ ಯಾವುದೇ ದೊಡ್ಡ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಹೀಗಾಗಿ ಮುಚ್ಚಲಾದ ರೈಲ್ವೇ ಗೇಟ್‌ನ್ನು ಮತ್ತೆ ತೆರೆದು ಜನರಿಗೆ ಅನುಕೂಲ ಮಾಡಿಕೊಡಬೇಕು. ಶಾಸಕರು, ಸಂಸದರು ಈ ಸಮಸ್ಯೆಯ ನಿಟ್ಟಿನಲ್ಲಿ ಗಮನಹರಿಸಬೇಕು ಎಂಬುದು ಸ್ಥಳೀಯ ಜನರ ಬೇಡಿಕೆಯಾಗಿದೆ.

Related posts

Leave a Reply