Header Ads
Breaking News

ಮುಡಿಪಿನಲ್ಲಿ ಮಾದುಮೂಲೆ ಪೆಟ್ರೋಲಿಯಮ್ಸ್ ಪೆಟ್ರೋಲ್ ಪಂಪ್ ಉದ್ಘಾಟನೆ

ಮುಡಿಪಿನಲ್ಲಿ ಎಚ್.ಪಿ ಕಂಪನಿಯ ಮಾದುಮೂಲೆ ಪೆಟ್ರೋಲಿಯಮ್ಸ್ ಪೆಟ್ರೋಲ್ ಪಂಪ್ ಉದ್ಘಾಟನೆಗೊಂಡಿತು. ಮುಡಿಪು ಗೌಸಿಯ ಜುಮಾ ಮಸೀದಿ ಖತೀಬ್ ಅಸೀಫ್ ಸಖಾಫಿ ದುಅ ನೇರವೆರಿಸಿದರು.ಮೊಹಮ್ಮದ್ ಫಯಾಝ್, ಮೊಹಮ್ಮದ್ ಕಲಂದರ್ ಹಾಗೂ ಮೊಹಮ್ಮದ್ ಹನೀಫ್, ತಾಜುದ್ದೀನ್ ಮಾಲಕತ್ವದ ಮಾದುಮೂಲೆ ಪೆಟ್ರೋಲಿಯಮ್ಸ್ ಸಂಸ್ಥೆಯನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಮುಡಿಪು ಒಂದು ಅತಂತ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ನ ಗುಣಮಟ್ಟವನ್ನು ಕಾಪಾಡಿ ಗ್ರಾಹಕರಿಗೆ ಉತ್ಯಮ ಸೇವೆ ನೀಡಿದಾಗ ಸಂಸ್ಥೆ ಅಭಿವೃದ್ಧಿಹೊಂದಲು ಸಾಧ್ಯ. ಮುಂದಿನ ದಿನಗಳಲ್ಲಿ ಮಾದುಮೂಲೆ ಪೆಟ್ರೋಲಿಯಮ್ಸ್ ಸಂಸ್ಥೆಯ ಇನ್ನಷ್ಟು ಶಾಖೆಗಳು ಪ್ರಾರಂಭಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹೇಳಿದರು.ಕಾಂಗ್ರೆಸ್ ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ ಮುಖ್ಯ ಅತಿಥಿಯಾಗಿ ಭಾಗಹಿಸಿ ಮಾತನಾಡಿ ಮಾದುಮೂಲೆ ಪೆಟ್ರೋಲಿಯಮ್ಸ್ ಸಂಸ್ಥೆಯ ಮಾಲಕರು ಮುಡಿಪು ಭಾಗದ ಸರ್ವಧರ್ಮಿಯರಿಗೆ ಪ್ರೀತಿಪಾತ್ರರಾಗಿದ್ದಾರೆ. ಬೇರೆ ಬೇರೆ ಉದ್ಯಮ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಪೆಟ್ರೋಲಿಂ ಕ್ಷೇತ್ರದಲ್ಲಿ ಮಾದುಮೂಲೆ ಪೆಟ್ರೋಲಿಯಮ್ಸ್ ಉತ್ತಮ ಸಾಧನೆ ಮಾಡಲಿ ಎಂದು ಶುಭಹಾರೈಸಿದರು.ಮಾಜಿ ಶಾಸಕ ಮೋಹಿದ್ದೀನ್ ಬಾವ,ಮುಡಿಪಿನ ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ಫಾ.ಬೆಂಝಮಿನ್ ಪಿಂಟೋ, ಕಾಂಗ್ರೆಸ್ ಮುಖಂಡ ಇಬ್ರಾಹೀಂ ಕೋಡಿಜಾಲ್, ಕಣತ್ತೂರು ಕ್ಷೇತ್ರದ ಅಡಳಿತ ಮುಕ್ತೇಸ್ತ ತಿಮ್ಮಪ್ಪ ಕೊಂಡೆ, ಹಾಜಿ ಹುಸೈನ್ ಮಾದುಮೂಲೆ, ಕುರ್ನಾಡು ಜಿ.ಪಂ ಸದಸ್ಯೆ ಮಮತ ಗಟ್ಟಿ, ಸಂಬರತೋಟ ಜುಮಾ ಮಸೀದಿ ಖತೀಬ್ ಮುನೀರ್ ಅಹ್ಸನಿ, ಮುಹಮ್ಮದ್ ಹಾಜಿ ಕೋಡಿಜಾಲ್, ತಾ.ಪಂ ಮಾಜಿ ಸದಸ್ಯ ಹೈದರ್ ಕೈರಂಗಳ, ಇಬ್ರಾಹೀಂ ಹಾಜಿ ಉಪಸ್ಥಿತರಿದರು.

Related posts

Leave a Reply

Your email address will not be published. Required fields are marked *