

ಸಂಬಂಧಿ ಮಹಿಳೆಯರಿಗೆ ತನ್ನ ಪತ್ನಿಯೊಂದಿಗೆ ಹಲ್ಲೆ ನಡೆಸುವ ಮುದರಂಗಡಿ ಅಟೋ ಚಾಲಕನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಯಾವುದೋ ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯೊಂದಿಗೆ ತೋಟದಲ್ಲಿ ಕಾಣಿಸಿಕೊಂಡು ವಯೋ ವೃದ್ದೆ ಮಹಿಳೆ ಸಹಿತ ಇತರೆ ಮಹಿಳೆಯರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಲ್ಲದೆ, ಅವರು ಪ್ರತಿರೋಧ ಒಡ್ಡಿದಾಗ ಕೆಟ್ಟ ಶಬ್ದಗಳಿಂದ ಬೈಯುವುದು ವಿಡಿಯೋದಲ್ಲಿ ಅಚ್ಚಾಗಿದೆ. ಹಲ್ಲೆ ನಡೆಸಿಯೂ ತಾನೇ ಹೋಗಿ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹೊಡೆದಾಟದಲ್ಲಿ ಪರಸ್ಪರ ಮಾಂಗಲ್ಯ ಸರಗಳು ತುಂಡಾದ ಬಗ್ಗೆ ಪರಸ್ಪರ ದೂರು ಅರ್ಜಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾಜಕೀಯ ವ್ಯಕ್ತಿಗಳ ಮಧ್ಯ ಪ್ರವೇಶದಿಂದ ಈ ಪ್ರಕರಣ ರಾಜಿಯಲ್ಲಿ ಅಂತ್ಯ ಕಂಡಿದೆ ಎನ್ನಲಾಗಿದೆ.