Header Ads
Header Ads
Header Ads
Header Ads
Header Ads
Header Ads
Breaking News

ಮುನ್ನೂರು ಉಳಿಯ ಸಮೀಪ ದಿಢೀರ್ ಆಗಿ ಆವರಿಸಿದ ನೆರೆ : ಬಾಣಂತಿಯ ರಕ್ಷಣೆ

ಮುನ್ನೂರು ಉಳಿಯ ಸಮೀಪ ದಿಢೀರ್ ಆಗಿ ಆವರಿಸಿದ ನೆರೆಯಿಂದ ಮನೆಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಬಾಣಂತಿ ಹಾಗೂ 10 ದಿನದ ಗಂಡು ಮಗುವನ್ನು ಸೋಮನಾಥ ಉಳಿಯದ ಸ್ಥಳೀಯರು, ಮುನ್ನೂರು ಗ್ರಾ.ಪಂ ಹಾಗೂ ಜಿ.ಪಂ ಸದಸ್ಯೆ ನೇತೃತ್ವದ ತಂಡ ರಕ್ಷಿಸಿದ್ದಾರೆ. ಶುಕ್ರವಾರ ತಡರಾತ್ರಿ ನೇತ್ರಾವತಿ ನದಿ ತೀರದ ಸೋಮನಾಥ ಉಳಿಯ ಸಮೀಪ ನೆರೆ ಆವರಿಸಿತ್ತು. ದೇವಸ್ಥಾನ ಸಮೀಪದಲ್ಲೇ ಇರುವ ಬಾಣಂತಿ ರಚನಾ ಹಾಗೂ ಅವರ 10 ತಿಂಗಳ ಮಗು ಹಾಗೂ ಆಕೆ ತಾಯಿ ನಾಗಿಣಿ ಮನೆಯೊಳಗೆ ಸಿಲುಕಿದ್ದರು. ಮಾಹಿತಿ ಪಡೆದ ಮುನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷೆ ಹಾಗೂ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಸೇರಿಕೊಂಡು ಇಂದು ಬೆಳಿಗ್ಗೆ ದಡ ಸೇರಿಸಿ ರಕ್ಷಿಸಿದರು. ಸ್ಥಳೀಯರಾದ ರಜನೀಶ್, ದಿನೇಶ್ ಸಹೋದರರು ವಿಶಾಲ್ ಕೊಲ್ಯ ಈ ಭಾಗದಲ್ಲಿ ಸಿಲುಕಿದ್ದ ಮನೆಮಂದಿಯನ್ನು ರಕ್ಷಿಸಲು ಮದ್ಯಾಹ್ನವರೆಗೆ ಕಾರ್ಯಾಚರಿಸಿದರು.

Related posts

Leave a Reply

Your email address will not be published. Required fields are marked *