Header Ads
Header Ads
Breaking News

ಮುನ್ನೂರು ಗ್ರಾ.ಪಂ. ಪಿಡಿಒ ಆತ್ಮಹತ್ಯೆ

ಪಂಚಾಯತ್ ಪಿಡಿಒವೊಬ್ಬರು ಗ್ರಾಮ ಪಂಚಾಯತ್ ಶೌಚಾಲಯದಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮ ಪಂಚಯತ್ ಕಚೇರಿಯಲ್ಲಿಂದು ನಡೆದಿದೆ.ಮುನ್ನೂರು ಗ್ರಾಮ ಪಂಚಾಯತ್ ಕೃಷ್ಣಸ್ವಾಮಿ ಮೃತಪಟ್ಟವರು. ಮಾಜಿ ಯೋಧರಾಗಿರುವ ಇವರು ಡೆತ್‌ನೋಟ್ ಬರೆದಿಟ್ಟು ತೊಕ್ಕೊಟ್ಟು ಬಳಿಯ ಕುತ್ತಾರ್ ಪದವಿನಲ್ಲಿರುವ ಮುನ್ನೂರು ಗ್ರಾಮ ಪಂಚಾಯತ್ ಕಚೇರಿಯ ಶೌಚಾಲಯದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಮದ್ಯವ್ಯಸನಿಯಾಗಿದ್ದರು. ಕೃಷ್ಣಸ್ವಾಮಿ ಮಂಗಳೂರಿನ ಕುಳಾಯಿಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು. ಅವರ ಪತ್ನಿ ಶಿಕ್ಷಕಿಯಾಗಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

   

Related posts

Leave a Reply