Header Ads
Breaking News

ಮುರುಳ್ಯ ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

ನಮ್ಮ ದೇಶದ ಸಂಸ್ಕೃತಿ ಅನನ್ಯವಾದದ್ದು, ಸಂಸ್ಕೃತಿ ನಾಶವಾದರೆ ಯುಗ, ಧರ್ಮ ನಾಶವಾದಂತೆ. ನವರಾತ್ರಿ ಉತ್ಸವಗಳು ಸಂಸ್ಕೃತಿ ಮತ್ತು ಸಂಪತ್ತನ್ನು ವೃದ್ದಿಸುವ ಹಬ್ಬ ಎಂದು ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಮಾಜಿ ಅಧ್ಯಕ್ಷ ಕಡಮಜಲು ಸುಭಾಷ್ ರೈ ಹೇಳಿದರು.ಅವರು ಮುರುಳ್ಯ ಕೇರ್ಪಡ ಶ್ರೀ ಮಹಿಷಮರ್ಧಿನಿ  ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವ ಸಂಪನ್ನದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ನಮ್ಮ ಆಚಾರ, ವಿಚಾರ, ಸಂಸ್ಕೃತಿಗಳು ಪಾಶ್ಚಾತ್ಯಕರಣದಿಂದ ಕಣ್ಮರೆ ಆಗುತ್ತಿದೆ. ಇದಕ್ಕಾಗಿ ನಾವು ಉತ್ತಮ ವಿಚಾರಗಳ ಮತ್ತು ವ್ಯಕ್ತಿತ್ವಗಳ ಬಗ್ಗೆ ಗಮನ ನೀಡಬೇಕು. ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುರುಳ್ಯ ಏಣ್ಮೂರು ಸೊಸೈಟಿ ಅಧ್ಯಕ್ಷ ಎಚ್. ವಸಂತ, ಚಲನಚಿತ್ರ ನಟ ಗಿರೀಶ್ ಹೆಗ್ಡೆ, ಸಮಿತಿಯ ಬಾಲಕೃಷ್ಣ ಕೆ, ನವೀನ್ ಕುಮಾರ್ ಬೊಳ್ಕೆಜೆ, ರಾಜೀವಿ ರೈ ಕಲ್ಲೇರಿ ಉಸ್ಥಿತಿತರಿದ್ದರು.

Related posts

Leave a Reply

Your email address will not be published. Required fields are marked *