Header Ads
Header Ads
Header Ads
Header Ads
Header Ads
Header Ads
Breaking News

ಮುಲ್ಕಿಯ ಕಿನ್ನಿಗೋಳಿಯಲ್ಲಿ ಕೈ ಮಗ್ಗ ದಿನಾಚರಣೆ

ಕಿನ್ನಿಗೋಳಿಯ ನೇಕಾರರ ಸಹಕಾರಿ ಸಂಘದಲ್ಲಿ. ಕೈಮಗ್ಗ ಮತ್ತು ಜವಳಿ ಇಲಾಖೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಂಟು ನೇಕಾರರ ಸಂಘಗಳು, ಕಾರ್ಕಳದ ಕದಿಕೆ ಟ್ರಸ್ಟ್ ಎಡಿಎಫ್‌ಟಿ ವಿಭಾಗ ಎನ್‌ಆರ್‌ಎಎಂ ನಿಟ್ಟೆ ಇವರ ವತಿಯಿಂದ ಕೈ ಮಗ್ಗ ದಿನಾಚರಣೆ ನಡೆಯಿತು. 

ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಜಿಲ್ಲಾ ಕೈಮಗ್ಗ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಶಿವಶಂಕರ್ ಕೈ ಮಗ್ಗದ ಬಟ್ಟೆಗಳನ್ನು ಉತ್ತೇಜಿಸುವ, ಪ್ರಚಾರ ಪಡಿಸುವ ಕೆಲಸ ಯುವ ಜನಾಂಗ ಮಾಡಬೇಕಾಗಿದೆ ಕೈಮಗ್ಗವನ್ನು ಉಳಿಸುವ ಮೂಲ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅನೇಕ ಜನರಿಗೆ ತರಬೇತಿ ನೀಡಲಾಗುತ್ತಿದೆ, ಎಂದರು. ಈ ಸಂದರ್ಭ ಎನ್‌ಆರ್‌ಎಎಂ ನಿಟ್ಟೆ ಕಾಲೇಜು ವಿಧ್ಯಾರ್ಥಿಗಳಿಂದ ನೇಕಾರಿಕೆ ಉಳಿಸುವಿಕೆಯ ಬಗ್ಗೆ ಜಾಗೃತಿ ಜಾಥಾ ನಡೆಯಿತು. ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಜಾಥವನ್ನು ಉದ್ಘಾಟಿಸಿದರು. ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು. ಉಡುಪಿ ಸೀರೆ ಅಭಿಯಾನ ಆರಂಭವಾದ ಮೇಲೆ ನೇಕಾರಿಕೆಗೆ ಮರಳಿ ಬಂದವರನ್ನು ಗೌರವಿಸಲಾಯಿತು. ಕೈಮಗ್ಗಗಳಲ್ಲಿ ಉಡುಪಿ ಸೀರೆ ನೇಯುತ್ತಿರುವುದನ್ನು ಅದಕ್ಕಾಗಿ ಚರಕದಲ್ಲಿ ನೂಲು ಸುತ್ತುವುದನ್ನು, ಆ ನೂಲುಗಳಿಗೆ ಬಣ್ಣ ಹಾಕುವುದನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು. ತಾಳಿಪಾಡಿ ಸಂಘದ ಆನಂದ ಶೆಟ್ಟಿಗಾರ್, ಕೆರೆಕಾಡು ಮಾಧವ ಶೆಟ್ಟಿಗಾರ್, ನಿಟ್ಟೆ ಸಂಸ್ಥೆಯ ಶ್ರೀಮತಿ ಧನಲಕ್ಷ್ಮೀ, ಕದಿಕೆ ಟ್ರಸ್ಟ್‌ನ ಚಿಕ್ಕಪ್ಪ ಶೆಟ್ಟಿ, ವಿವಿಧ ನೇಕಾರರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *