Breaking News

ಮುಸ್ಲಿಂ ಮುಖಂಡನಿಗೆ ಜೀವಬೆದರಿಕೆ ಬಿಜೆಪಿ ಸಭೆಯಲ್ಲಿ ಭಾಗಿಯಾಗಿದ್ದಕ್ಕೆ ಜೀವ ಬೆದರಿಕೆ ಸಭೆಯಲ್ಲಿ ಭಾಗಿಯಾಗಿದ್ದ ಎ.ಬಿ. ಹನೀಫ್ ನಿಝಾಮಿಗೆ ಬೆದರಿಕೆ

 

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ನಡೆಸಲಾದ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯ ಬಗ್ಗೆ ಭಾರೀ ಅಪಸ್ವರ ಕೇಳಿ ಬಂದಿದ್ದು, ಸಭೆಯಲ್ಲಿ ಭಾಗವಹಿಸಿದ ಮುಸ್ಲಿಂ ಮುಖಂಡರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬಂದಿರುವ ವಿಚಾರ ಬೆಳಕಿಗೆ ಬಂದಿದೆ.
ಬೋಳಿಯಾರು ಸಭಾಂಗಣದಲ್ಲಿ ಗುರುವಾರ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮುಸ್ಲಿಂ ಧಾರ್ಮಿಕ ಮುಖಂಡರುಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಜಿಲ್ಲೆಯ ಹಲವು ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿ ಸುವ ಮೂಲಕ ಸಭೆ ಸಂಚಲನ ಸೃಷ್ಟಿಸಿತ್ತು. ಬಿಜೆಪಿ ಪಕ್ಷ ಆಯೋಜಿಸಿದ್ದ ಈ ಸಭೆಯಲ್ಲಿ ೧೦೦ಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರುಗಳು ಭಾಗಿಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಜಿಲ್ಲೆಯಲ್ಲಿ ಪ್ರಥಮ ವಾಗಿ ನಡೆದ ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ಭಾಗಿ ಕ್ಷೇತ್ರದಲ್ಲಿ ಬಿಜೆಪಿಯ ಭವಿಷ್ಯವನ್ನು ಬದಲಾಯಿಸುವ ಸಾಧ್ಯತೆಗಳಿವೆ ಅನ್ನುವ ಅಭಿಪ್ರಾಯ ಕೂಡ ಕೇಳಿ ಬಂದಿತ್ತು. ಆದರೆ ಇದೀಗ ಸಭೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಹಲವು ಮುಸ್ಲಿಂ ಮೂಲಭೂತವಾದಿಗಳು ಆಕ್ಷೇಪವೆತ್ತಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ಮುಖಂಡರ್‍ಯಾರು?
ಸಭೆಯಲ್ಲಿ ಜಿಲ್ಲೆಯ ಹಲವು ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಅಝೀಝ್ ಪ್ರಾನ್ಸಿ, ಹನೀಫ್ ಮಿಝಾಮಿ, ಸಿದ್ದೀಖ್ ಇಮಾಮಿ, ಉಸ್ಮಾನ್ ಮದನಿ, ಹೈದರ್ ಸಅದಿ, ಎ.ಬಿ. ಹನೀಪ್ ನಿಝಮಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಪ್ರಧಾನ ಕಾರ್‍ಯದರ್ಶಿ ಫಝಲ್ ಅಸೈಗೋಳಿ, ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್‍ಯದರ್ಶಿ ಡಾ.ಮುನೀರ್ ಬಾವ, ಖಲಂದರ್ ಅಸೈಗೋಳಿ, ನಿಝಾಮುದ್ದೀನ್ ಸಅದಿ, ಮಂಗಳೂರು ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಮುನೀರ್ ಮಾಸ್ಟರ್, ಅಲ್ಪಸಂಖ್ಯಾತ ಮೋರ್ಚಾದ ಕ್ಷೇತ್ರ ಅಧ್ಯಕ್ಷ ಅಶ್ರಫ್ ಹರೇಕಳ, ದೇವದಾಸ್ ಶೆಟ್ಟಿ, ಮುಸ್ತಾಫ ಕಲ್ಲಡ್ಕ, ಮಂಗಳೂರು ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಸ್ಗರ್, ಮಂಗಳೂರು ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾಜಂಜಿ ಶರೀಫ್ ಬೋಳಿಯಾರ್ ಸೇರಿ ಹಲವರು ಪಾಲ್ಗೊಂಡಿದ್ದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೇರಿ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು.
‘ಉಸ್ತಾದರನ್ನು ಮುಖ್ಯವಾಹಿನಿಗೆ ತರುವ
ಕೆಲಸ ಮುಸ್ಲಿಂ ಶಾಸಕರಿಂದ ಆಗಿಲ್ಲ’
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಪ್ರಧಾನ ಕಾರ್‍ಯದರ್ಶಿ ಫಝಲ್ ಅಸೈಗೋಳಿ ಮಾತನಾಡಿ ಮಸೀದಿ, ಮದರಸದಲ್ಲಿರುವ ಉಸ್ತಾದರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಇಲ್ಲಿನ ಮುಸ್ಲಿಂ ಶಾಸಕರಿಂದ ಅಸಾಧ್ಯವಾಗಿದೆ. ಬಹುಸಂಖ್ಯಾತರಲ್ಲಿ ಧಾರ್ಮಿಕ ಮುಖಂ ಡರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರಲ್ಲಿ ಅಂತಹ ವ್ಯವಸ್ಥೆಯಿಲ್ಲ ಅನ್ನುವ ಪ್ರಶ್ನೆ ಇದೆ. ಆದರೆ ಬಿಜೆಪಿ ಧಾರ್ಮಿಕ ಮುಖಂಡರುಗಳನ್ನು ಚುನಾವಣೆಗೆ ನಿಂತು ಜನಪ್ರತಿನಿಧಿಯಾಗಲು ಆಹ್ವಾನಿಸುತ್ತದೆ. ಉಸ್ತಾದರು ವಿವಿಧ ಸಂಘಟನೆಗಳನ್ನು ಮಾಡಿ ವಿಭಜನೆಯಾಗದೆ ಸಮಾಜದ ಮುಖ್ಯವಾಹಿನಿಗೆ ಬಂದು ಜನಪ್ರತಿನಿಧಿಗಳಾಗಿ ಎಂದರು.

ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ಧಾರ್ಮಿಕ ಮುಖಂಡ ಎ.ಬಿ. ಹನೀಫ್ ನಿಝಮಿ ಎಂಬವರಿಗೆ ವಿದೇಶದಿಂದ ಮೂರು ಬೆದರಿಕೆ ಕರೆಗಳು ಬಂದಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ವಿರೋಧಿಸಿ ಮಾತನಾಡಿದ ಕರೆ ಮಾಡಿದವರು ಕೊಲ್ಲುವ ಬೆದರಿಕೆಯನ್ನು ಒಡ್ಡಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ವತಿಯಿಂದ ನಡೆದಿರುವ ಸಭೆ ವಿವಾದಕ್ಕೀಡಾಗುತ್ತಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ.
ವರದಿ: ಆರ್.ಎ ಲೋಹಾನಿ ಮಂಗಳೂರು

Related posts

Leave a Reply