Header Ads
Header Ads
Breaking News

ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ತಾಲೂಕು ಮಟ್ಟದ ಪ್ರೌಢ, ಪ್ರಾಥಮಿಕ ಶಾಲಾ ಕ್ರೀಡಾಕೂಟ ಆರಂಭ

ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ಆಲಂಗಾರಿನ ಸಂತ ಥೋಮಸ್ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಸ್ವರಾಜ್ಯ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಮೂಡುಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ “ಕ್ರೀಡಾಕೂಟ-2019-20” ಗುರುವಾರ ಆರಂಭಗೊಂಡಿತು. ಜಿ.ಪಂಚಾಯತ್ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆಯನ್ನು ವಹಿಸಿದ್ರು. ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಅವರು ಕ್ರೀಡಾ ಪಟುಗಳಾದ ರಾಮ್, ರಾಜಶ್ರೀ ಆಚಾರ್ಯ, ರಾಯ್‍ಸ್ಟನ್ ಮೋರಾಸ್, ಅಮೃತಾ ಶೆಟ್ಟಿ, ವೀರೇಂದ್ರ ಡಿ”ಸೋಜಾ, ಜೇನ್ ಅಣ್ಣಿ ಡಿ”ಸೋಜಾ, ಸುಶ್ರೀತಾ ಮತ್ತು ಆದಿತ್ಯ ಆರ್ ಅವರಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು. ಸಂತ ಥೋಮಸ್ ವಿದ್ಯಾ ಸಂಸ್ಥೆಗಳ ಸಂಚಾಲಕ, ಧರ್ಮಗುರು ವಾಲ್ಟರ್ ಡಿ”ಸೋಜಾ ಅವರು ಆಶೀರ್ವಚನ ನೀಡಿದರು. ಮಾಜಿ ಸಚಿವರುಗಳಾದ ಕೆ. ಅಮರನಾಥ ಶೆಟ್ಟಿ ಧ್ವಜಾರೋಹನಗೈದರು. ಕೆ.ಅಭಯಚಂದ್ರ ಜೈನ್ ಗೌರವ ರಕ್ಷೆಯನ್ನು ಸ್ವೀಕರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಂಘದ ಅಧ್ಯಕ್ಷ ನಾಗೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿನಯ್ ಕುಮಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಪ್ರೇಮಶ್ರೀ ಮೂಡಿಬಿದಿರೆ

Related posts

Leave a Reply

Your email address will not be published. Required fields are marked *