Header Ads
Header Ads
Header Ads
Header Ads
Header Ads
Header Ads
Breaking News

ಮೂಡಬಿದಿರೆ ಸಮಾಜ ಮಂದಿರ ಸಭಾ (ರಿ) ವತಿಯಿಂದ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ

ಮೂಡಬಿದಿರೆ ಸಮಾಜ ಮಂದಿರ ಸಭಾ(ರಿ) ಇದರ ವತಿಯಿಂದ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ  ಉತ್ಸವ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸೆ29ರಿಂದ ಅ3ರವರೆಗೆ ನಡೆಯಲಿದೆ ಅಂತ ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಮೂಡುಬಿದಿರೆಯ ಈ ದಸರಾ ಉತ್ಸವ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉದ್ಘಾಟನಾ ಸಮಾರಂಭದಂದು ಡಾ. ಬಿ.ಎ. ವಿವೇಕ ರೈ ಅವರು ಯುರೋಪಿನಲ್ಲಿ ಕನ್ನಡ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದರು. ಈ ಸಂದರ್ಭ ಸಮಾಜ ಮಂದಿರ ಸಭಾದ ಜತೆ ಕಾರ್ಯದರ್ಶಿ ಕೆ. ಆರ್. ಪಂಡಿತ್, ಕೋಶಾಧಿಕಾರಿ ವಾಸುದೇವರಾವ್, ದಸರಾ ಉತ್ಸವ ಸಂಚಾಲಕರಾಗಿರುವ ಡಾ. ಪುಂಡಿಕಾೈ ಗಣಪಯ್ಯ ಭಟ್, ಎಂ.ಗಣೇಶ್ ಕಾಮತ್, ಸಹಿತ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *