Header Ads
Header Ads
Header Ads
Breaking News

ಮೂಡಬಿದ್ರೆಯ ತೆಂಕಮಿಜಾರಿನಲ್ಲಿ ಮಕ್ಕಳ ಗ್ರಾಮಸಭೆ

ಮೂಡುಬಿದಿರೆ : ವಿದ್ಯಾರ್ಥಿಗಳು ಬೇಕರಿಗಳಲ್ಲಿ ಸಿಗುವ ಜಂಕ್ ಫುಡ್‌ಗಳನ್ನು ಸೇವಿಸದೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಆರೋಗ್ಯವಂತರಾಗಲು ಸಾಧ್ಯವಿದೆ ಎಂದು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರವಾಗಿ ಆಗಮಿಸಿದ ಖಾದರ್ ನಾಸಿಫ್ ಸಲಹೆ ನೀಡಿದರು.

ಅವರು ತೆಂಕಮಿಜಾರು ಗ್ರಾ.ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಶನಿವಾರ ಅಶ್ವತ್ಥಪುರದ ಸಂತೆಕಟ್ಟೆ ವಿವಿದ್ದೋದ್ದೇಶ ಸಭಾಂಗಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು. ಹದಿ ಹರೆಯದಲ್ಲಿರುವ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಿವಿ ಮಾತು ಹೇಳಿದರು. ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ವಿವಿಧ ಶಾಲೆಯ ವಿದ್ಯಾರ್ಥಿ ನಾಯಕರುಗಳು ಉದ್ಘಾಟಿಸಿದರು.  ವಿವಿಧ ಶಾಲೆಗಳ ವಿದ್ಯಾರ್ಥಿಗಳು ತತಮ್ಮ ಶಾಲೆಗೆ ಬೇಕಾಗಿರು ಮೂಲಭೂತ ಸೌಕರ್ಯಗಳಾದ ಆವರಣ ಗೋಡೆ, ಹೆಚ್ಚುವರಿ ಕೊಠಡಿಗಳನ್ನು ನೀಡಬೇಕೆಂದು ಕೇಳಿಕೊಂಡರು. ಆಳ್ವಾಸ್ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಪರವಾಗಿ ಕರುಣಾಕರ, ಪಶು ವೈದ್ಯಾಧಿಕಾರಿ ಡಾ/ಗುರುನಾಥ್ ಮಾಹಿತಿಯನ್ನು ನೀಡಿದರು. ಉಪಾಧ್ಯಕ್ಷೆ ಯಶೋಧ ದೇವಾಡಿಗ ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *