Header Ads
Breaking News

ಮೂಡುಬಿದರೆಯಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನತೆ : ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿರುವ ಪೊಲೀಸರು

ಮೂಡುಬಿದಿರೆ : ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ವೈರಸನ್ನು ತಡೆಗಟ್ಟಲು ಸಾಧ್ಯವಿದೆ ಎಂಬುದನ್ನು ಅರಿತು ಮೂಡುಬಿದಿರೆ ಪೊಲೀಸ್ ರು ನಿನ್ನೆ ರಾತ್ರಿ ಅಂಗಡಿ ಮುಂಗಟ್ಟು ಮತ್ತು ಮೆಡಿಕಲ್ ಗಳ ಬಳಿ ಸಾಲಾಗಿ ದೂರ ದೂರ ನಿಲ್ಲಲು ಕಾಲಂಗಳನ್ನು ಹಾಕಿದ್ದರೂ ಬುಧವಾರದಂದು ಮಾತ್ರ ಜನರು ಕೆಲವು ಕಡೆಗಳಲ್ಲಿ ರಾಶಿ ರಾಶಿಯಾಗಿ ನಿಂತು ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳದೆ ನಿಂತಿರುವ ದೃಶ್ಯಗಳು ಕಂಡು ಬಂದವು ಆದರೆ ಕೆಲವು ಅಂಗಡಿಗಳ ಬಳಿಗಳಲ್ಲಿ ಅಂತರದಲ್ಲಿ ಸಾಲಾಗಿ ನಿಂತು ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದುದೂ ಕಂಡು ಬಂತು..ಪೊಲೀಸ್  ಸಿಬಂದಿಗಳು ಮತ್ತು ಹೋಂಗಾಡ್ರ್ಸ್ ಸಿಬಂದಿಗಳು ಜನರು ಅಂತರವನ್ನು ಕಾಯ್ದುಕೊಳ್ಳುವಂತೆ ಆಗಾಗ ಮೈಕ್ ನಲ್ಲಿ ಜಾಗೃತಿಯನ್ನುಮೂಡಿಸುತ್ತಿರುವುದು ಕಂಡು ಬಂತು..ಯುಗಾದಿ ಹಬ್ಬದ ದಿನವಾಗಿದ್ದರಿಂದ ಇಂದು ಮೂಡುಬಿದಿರೆಯಲ್ಲಿ ನಿನ್ನೆ ಮೊನ್ನೆಗಿಂತ ಹೆಚ್ಚಿನ ಜನ ಸಂದಣಿ ಇತ್ತು.

Related posts

Leave a Reply

Your email address will not be published. Required fields are marked *