Header Ads
Header Ads
Breaking News

ಮೂಡುಬಿದರೆಯಲ್ಲಿ ಮಾಂಸದ ಮಾರ್ಕೆಟಿನ ತ್ಯಾಜ್ಯ ನೀರು ರಸ್ತೆಗೆ : ಎಚ್ಚೆತ್ತುಕೊಂಡ ಪುರಸಭೆ

ಮೂಡುಬಿದಿರೆ : ಕಳೆದ ಕೆಲವು ದಿನಗಳಿಂದ ಮೂಡುಬಿದಿರೆಯ ತಾತ್ಕಾಲಿಕ ಮಾರ್ಕೆಟಿನಲ್ಲಿರುವ ಮಾಂಸದ ಅಂಗಡಿಗಳಿಂದ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದರು ಆದರೆ ಪುರಸಭೆಯು ಇದನ್ನು ಕಂಡೂ ಕಾಣದಂತೆ ಕೈಕಟ್ಟಿ ಕುಳಿತು ನಿರ್ಲಕ್ಷ್ಯ ತೋರಿದೆ. ಗುರುವಾರ ಬೆಳಿಗ್ಗೆಯೂ ಮಾಂಸದ ಮಾರ್ಕೆಟಿನಿಂದ ರಕ್ತವನ್ನೊಳಗೊಂಡ ತ್ಯಾಜ್ಯ ನೀರು ಮತ್ತು ಮಾಂಸದ ತುಂಡುಗಳುನ್ನು ಅಂಗಡಿ ಮಾಲಕರು ರಸ್ತೆಗೆ ಹರಿಯಬಿಟ್ಟಿದ್ದು ಈ ಬಗ್ಗೆ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯು ಮೂಡುಬಿದಿರೆ ಪುರಸಭೆಗೆ ಕರೆ ಮಾಡಿ ಖಂಡನೆ ಮಾಡಿದ್ದಲ್ಲದೆ ಸೋಶಿಯಲ್ ಮೀಡಿಯಾಗಳಿಗೆ ವಸ್ತುಸ್ಥಿತಿಯ ವೀಡಿಯೋಗಳನ್ನು ಹರಿಯಬಿಟ್ಟಿತ್ತು. 

ಪುರಸಭಾ ಅಧಿಕಾರಿಗಳೇ ನೀವು ಡಿಡಿಟಿ ಬ್ಲೀಚಿಂಗ್ ಫೌಡರ್ ಮೊದಲಾದುದಕ್ಕೆ ಸೀಮಿತವಾಗಬೇಡಿ, ನೀರು ಹೋಗುವ ಸೂಕ್ತವಾದ ತೋಡಿನ ವ್ಯವಸ್ಥೆ ಅಥವಾ ಸ್ಲಾಟರ್ ಪರ್ಮಿಶನ್‌ನಲ್ಲಿ ಕೊಡಬೇಡಿ ಎಂದು ಎಚ್ಚರಿಸಿದ್ದಲ್ಲದೆ ತ್ಯಾಜ್ಯ ನೀರನ್ನು ರಸ್ತೆಗೆ ಹರಿಯ ಬಿಟ್ಟಿರುವವರ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿತ್ತು.

ಜವನೆರ್ ಬೆದ್ರ ಸಂಘಟನೆಯ ದೂರಿಗೆ ತಕ್ಷಣ ಎಚ್ಚೆತ್ತುಕೊಂಡ ಪುರಸಭಾ ಅಧಿಕಾರಿಗಳು ಮತ್ತು ಸಿಬಂದಿ ವರ್ಗ ಸ್ಥಳಕ್ಕೆ ಆಗಮಿಸಿ ಮಾಂಸದ ಅಂಗಡಿಯ ಪೈಪ್‌ಗಳಿಗೆ ಜಾಲಿಯನ್ನು ಅಳವಡಿಸಿ ಮಾಂಸದ ತುಂಡುಗಳು ಹೋಗಿ ಬ್ಲಾಕ್ ಆಗದಂತೆ ಕಾಮಗಾರಿ ನಡೆಸಿ ತ್ಯಾಜ್ಯ ನೀರು ರಸ್ತೆಗೆ ಹೋಗುವುದನ್ನು ತಡೆ ಹಿಡಿದಿದ್ದಾರೆ.

Related posts

Leave a Reply

Your email address will not be published. Required fields are marked *