Header Ads
Breaking News

ಮೂಡುಬಿದರೆಯಲ್ಲಿ ರೈತರಿಗೆ ಕೃಷಿ ಸಲಕರಣೆ ವಿತರಣೆ

ಮೂಡುಬಿದಿರೆ : ದ.ಕ. ಜಿ.ಪಂ. ಕೃಷಿ ಇಲಾಖೆ ತಾಲೂಕು ರೈತಸಂಪರ್ಕ ಕೇಂದ್ರದಲ್ಲಿ 2020-21ನೇ ಸಾಲಿನ ವಿವಿಧ ಯೋಜನೆಗಳಡಿ ತಾಲೂಕಿನ 103 ಮಂದಿ ರೈತರಿಗೆ ಕೃಷಿ ಇಲಾಖೆಯ ಸಹಾಯಧನದಲ್ಲಿ ಒದಗಿಸಲಾಗಿರುವ ಕೃಷಿ ಸಲಕರಣೆಗಳನ್ನು ದ.ಕ. ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ವಿತರಿಸಿದರು. ನಂತರ ಮಾತನಾಡಿದ ಅವರು ಕೃಷಿಕರು ಎದುರಿಸುತ್ತಿರುವ ಪ್ರತಿಕೂಲ ಪರಿಸ್ಥಿತಿಯನ್ನು ಅನುಕೂಲಕರವಾಗಿಸಲು ಸೂಕ್ತ ಸವಲತ್ತುಗಳನ್ನು ಸರಕಾರದ ಮೂಲಕ ಒದಗಿಸಲು ಜನಪ್ರತಿನಿಧಿಗಳೂ ಅಧಿಕಾರಿಗಳೂ ಬದ್ಧರು. ಅದೇ ರೀತಿ, ಸರಕಾರ ಒದಗಿಸುತ್ತಿರುವ ಎಲ್ಲ ಸವಲತ್ತುಗಳನ್ನು ಪಡೆದು ಸುಸ್ಥಿರ ಕೃಷಿಕಾರ್ಯ ನಡೆಸಿ ಸ್ವಾವಲಂಬಿಗಳಾಗಲು ರೈತರು ಮುಂದೆ ಬರಬೇಕಾಗಿದೆ’ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಎ.ಪಿ.ಎಂ.ಸಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ಕೃಷಿಕರು ಮಧ್ಯವರ್ತಿಗಳಿಂದ, ಕಮಿಷನ್ ಏಜೆಂಟರಿಂದ ಮುಕ್ತರಾಗಿ ಯಾವುದೇ ತೆರಿಗೆ, ಕಮಿಶನ್ ಇಲ್ಲದೆ ದೇಶದ ತಮ್ಮ ಉತ್ಪನ್ನಗಳನ್ನು ಎಲ್ಲೂ ಮಾರಲು ಅವಕಾಶವಿದೆ. ಆದರೆ, ಈ ಮಧ್ಯವರ್ತಿಗಳ ಪರವಾಗಿ ನಿಂತವರು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಸುಜಾತಾ ಕೆ.ಪಿ., ತಾ.ಪಂ. ಸದಸ್ಯರಾದ ರೀಟಾ ಕುಟಿನ್ಹ , ನಾಗವೇಣಿ, ‘ಮೂಡಾ’ ಅಧ್ಯಕ್ಷ ಮೇಘನಾಥ್ ಶೆಟ್ಟಿ , ಪುರಸಭಾ ಸದಸ್ಯರಾದ ರಾಜೇಶ್ ನಾಯಕ್, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ನವೀನ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *