Header Ads
Header Ads
Breaking News

ಮೂಡುಬಿದರೆಯಲ್ಲಿ ಸುಮಾರು 83 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟನೆ

ಮೂಡುಬಿದರೆ ವಿಧಾನ ಸಭಾ ಕ್ಷೇತ್ರದಲ್ಲಿ ಮಳೆ ಹಾನಿ ರಸ್ತೆ ಅಭಿವೃದ್ಧಿ ಪಡಿಸಲು ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಮಂಜೂರಾಗಿರುವ ರೂ 83 ಲಕ್ಷದ ಕಾಮಗಾರಿಗಳನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು. 

ನಂತರ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರದ ಪುರಸಭೆ ಮತ್ತು ನಗರಸಭೆಗೆ ಸುಮಾರು 4ಕೋಟಿಯ ಸ್ಪೆಷಲ್ ಅನುದಾನ ತರಲಾಗುತ್ತಿದೆ. ಈಗಾಗಲೇ 27 ಕೋಟಿ ಅನುದಾನವನ್ನು ತರಲಾಗಿದೆ. ಕಟೀಲಿನ ಬ್ರಹ್ಮಕಲಶಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ 5 ಕೋಟಿ ತರಲಾಗಿದೆ. ವಿಧಾನಸಭಾ ಕ್ಷೇತದ್ರ ರಾಜಕೀಯ ಮಾಡದೆ ಹಿರಿಯರ ಮಾರ್ಗದರ್ಶನ ಮತ್ತು ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಲಾಗುವುದು ಎಂದರು.
ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ನಾವು ಬೇಡಿಕೆ ಇಡುವುದಕ್ಕಿಂತಲೂ ಇಲ್ಲಿನ ಜನರ ಬೇಡಿಕೆಗಳನ್ನು ತಿಳಿದುಕೊಳ್ಳುವ ಬಗ್ಗೆ ಶಾಸಕರ ಅಗತ್ಯತೆ ಬೇಕಾಗಿತ್ತು. ಅದು ಈಗ ಉಮಾನಾಥ ಕೋಟ್ಯಾನ್ ಅವರ ಮೂಲಕ ಸಾಕಾರಗೊಂಡಿದೆ ಎಂದರು.

ಪುರಸಭಾ ಚುನಾಯಿತ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ರಾಜೇಶ್ ನಾಯ್ಕ್, ಇಕ್ಬಾಲ್ ಕರೀಂ, ಸ್ವಾತಿ ಪ್ರಭು, ಕುಶಲ ಯಶೋಧರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *