Header Ads
Breaking News

ಮೂಡುಬಿದರೆಯ ಸಾವಿರ ಕಂಬದ ಬಸದಿಯಲ್ಲಿ ಮನ್ಮಹಾರಥೋತ್ಸವ ಕಾರ್ಯಕ್ರಮ

ಮೂಡುಬಿದರೆಯಲ್ಲಿರುವ ಸಾವಿರ ಕಂಬದ ಬಸದಿಯ ಮನ್ಮಹಾರಥೋತ್ಸವ, ಮಹಾವೀರ ಜಯಂತ್ಯೋತ್ಸವ ಹಾಗೂ ಶ್ರಮಣ ಸಂಸ್ಕೃತಿ ಸಮ್ಮೇಳನದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.

ಮೂಡುಬಿದರೆಯ ಸಾವಿರ ಕಂಬದ ಬಸದಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆರ್ಗನ್ ಡೊನೇಶನ್ ಇಂಡಿಯಾ ಪೌಂಡೇಶನ್‌ನ ಚೇರ್‌ಮೆನ್ ಮತ್ತು ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಪ್ರವರ್ತಕರಾದ ಲಾಲ್ ಗೋಯಲ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಅವರು, ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಮುಖ್ಯವಾದದು. ಕೊನೆಯ ತೀರ್ಥಂಕರನಾದ ಮಹಾವೀರ ಜನ್ಮ ದಿನವನ್ನು ಆಚರಿಸುತ್ತೇವೆ ಎಂದು ಹೇಳಿದರು.
ಆನಂತರ ಪರಮ ಪೂಜ್ಯ ಭಾರತ್ ಭೂಷಣ ಸ್ವಸ್ಥಿಶ್ರೀ ಭಟ್ಟಾರಕ ಚಾರುಕಿರ್ತಿ ಪಂಡಿತಾಚರ್ಯವರ್ಯ ಮಹಾಸ್ವಾಮೀಜಿ ಅವರು ಮಾತನಾಡಿ ಆಶೀವರ್ಚನ ನೀಡಿದರು.

ಇದೇ ವೇಳೆ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರು ಮಾತನಾಡಿ, ಪೂಜ್ಯ ಸ್ವಾಮೀಜಿಯವರು ಮಹಾವೀರ ಜಯಂತಿಯನ್ನು ಪ್ರತಿವರ್ಷ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಯುವರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *