Header Ads
Breaking News

ಮೂಡುಬಿದರೆ ಜನಸಂಪರ್ಕ ಸಭೆ : ಶಾಲಾ ಬಳಿ ಇರುವ ಅಪಾಯಕಾರಿ ತಂತಿಗಳನ್ನು ತೆಗೆಯುವಂತೆ ಶಿಕ್ಷಕಿಯ ಆಗ್ರಹ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆ ಶಾಲಾವರಣದಲ್ಲಿ ಸುರಕ್ಷಾ ಸಪ್ತಾಹ ಆಚರಿಸಿದ ಇಲಾಖೆಯವರು ವಿದ್ಯಾರ್ಥಿಗಳು ಮನೆಗೆ ಹೋದ ಬಳಿಕ ಹಳೆಯ ವಿದ್ಯುತ್ ತಂತಿ ಇರುವಲ್ಲಿ ಹೊಸದಾಗಿ ತಂತಿ ಎಳೆದು ಹೋಗಿದ್ದಾರೆ. ಆ ಪ್ರದೇಶ ವಿದ್ಯಾರ್ಥಿಗಳು ಆಟವಾಡುವ ಜಾಗವಾಗಿದ್ದು ಅಪಾಯಕಾರಿ ಸ್ಥಿತಿ ಇದೆ ’ ಎಂದು ಶಾಲಾ ಮುಖ್ಯಶಿಕ್ಷಕಿ ಎಲ್ವಿರಾ ಪಿಂಟೋ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು.

ಮೆಸ್ಕಾಂ ಮೂಡುಬಿದಿರೆ ಉಪವಿಭಾಗವು ಗುರುವಾರ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಶಿಕ್ಷಕಿ ಅವರು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಾಗ ‘ಕೂಡಲೇ ಇದನ್ನು ತೆಗೆಸಲು ಕ್ರಮ ಕೈಗೊಳ್ಳುವುದಾಗಿ’ ಮೆಸ್ಕಾಂ ಮಂಗಳೂರು ವೃತ್ತ ಕಚೇರಿ ಎಂಜಿನಿಯರಿಂಗ್ ವಿಭಾಗದ ಅಧೀಕ್ಷಕ ಮಂಜಪ್ಪಹೇಳಿದರು.

ಶಿರ್ತಾಡಿಗೆ 110 ಕೆವಿ ಸಾಮರ್ಥ್ಯದ ಸಬ್‌ಸ್ಟೇಶನ್ ಸ್ಥಾಪಿಸಲು ಒತ್ತಾಯ ಇರುವುದಾದರೂ ಅದಕ್ಕೆ ಬೇಕಾದ ಸುಮಾರು ಎರಡೂವರೆ ಎಕ್ರೆ ಸರಕಾರಿ ಜಮೀನನ್ನು ಮೆಸ್ಕಾಂ ಒದಗಿಸಿಕೊಡಲಾಗಿದೆ ಈ ಬಗ್ಗೆ ದರೆಗುಡ್ಡೆ-ಶಿರ್ತಾಡಿ -ಅಳಿಯೂರು-ವಾಲ್ಪಾಡಿ ಪ್ರದೇಶದ ಗ್ರಾಹಕರು ಮೂರು ಬಾರಿ ಮೆಸ್ಕಾಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲದಿರುವ ಬಗ್ಗೆ ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಮಾಜಿ ತಾ.ಪಂ. ಸದಸ್ಯ ರುಕ್ಕಯ್ಯ ಪೂಜಾರಿ, ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಅಧಿಕಾರಿಗಳ ಗಮನ ಸೆಳೆದಾಗ ಮಂಜಪ್ಪ ಅವರು ಸ್ಪಂದಿಸಿ, ಶಿರ್ತಾಡಿಗೆ ೩೩ಕೆವಿ ಸಾಮರ್ಥ್ಯದ ಸಬ್‌ಸ್ಟೇಶನ್ ಸ್ಥಾಪಿಸುವ ಬಗ್ಗೆ ಒಂದು ತಿಂಗಳ ಒಳಗಾಗಿ ಯೋಜನಾ ವರದಿಯನ್ನು ಆದ್ಯತೆ ಮೇರೆಗೆ ತಯಾರಿಸಿ ಮೇಲಾಕಾರಿಗಳಿಗೆ ಕಳುಹಿಸಿ ಕೊಡುವುದಾಗಿ ಪ್ರಕಟಿಸಿದ ಅವರು ‘ಇದಕ್ಕೆ ಬೇಕಾದ ೮೫ ಸೆಂಟ್ಸ್ ಜಾಗವನ್ನು ಮೆಸ್ಕಾಂಗೆ ಒದಗಿಸಿಕೊಡುವ ಬಗ್ಗೆ ಶಾಸಕರಲ್ಲಿ ಮಾತನಾಡುತ್ತೇನೆ. ಸದ್ಯ ೩೩ ಕೆವಿ. ಸಾಮರ್ಥ್ಯದ ಸಬ್‌ಸ್ಟೇಶನ್ ಸ್ಥಾಪಿಸೋಣ’ ಎಂದು ಭರವಸೆ ಇತ್ತರು.

ಹೊಸಬೆಟ್ಟು ವಿಜಯನಗರದಲ್ಲಿ ತಂತಿಗಳಿಗೆ ಅಪಾಯಕಾರಿಯಾಗಿರುವ ಮರಗಳ ಗೆಲ್ಲುಗಳನ್ನು ಸವರಬೇಕು ಎಂದು ಪಂ. ಸದಸ್ಯ ಮೈಕಲ್ ವಿನಂತಿಸಿದರು. ಪಳ್ಳಿಗುಡ್ಡೆಯಲ್ಲಿ ತಂತಿಗಳು ನೇತಾಡುತ್ತಿರುವ ಬಗ್ಗೆ ಹರಿಯಪ್ಪ ಪೂಜಾರಿ ಅಧಿಕಾರಿಗಳ ಗಮನ ಸೆಳೆದರು.
ಮೆಸ್ಕಾಂ ಕಾವೂರು ಪ್ರ. ಕಾ.ನಿ. ಎಂಜಿನಿಯರ್ ಪ್ರೀತಿ, ಮೂಡುಬಿದಿರೆ ಮೆಸ್ಕಾಂ ಸ.ಕಾ.ನಿ. ಎಂಜಿನಿಯರ್ ಡಿ.ಆರ್.ಸತೀಶ್, ಸ. ಲೆಕ್ಕಾಧಿಕಾರಿ ಉಷಾಕಿರಣ್ ಕುಟಿನ್ಹ, ತಾಂತ್ರಿಕ ಸ.ಎಂಜಿನಿಯರ್ ಕ್ಲೆಮಂಟ್ ಬೆಂಜಮಿನ್ ಬ್ರಾಗ್ಸ್, ಪ್ರಭಾರ ಶಾಖಾಽಕಾರಿ ಮಮತಾ, ಬೆಳುವಾಯಿ ಶಾಖಾಽಕಾರಿ ಅಮಿತ್ ಕುಮಾರ್, ಮೇಲ್ವಿಚಾರಕ ಬಾಲಕೃಷ್ಣ, ಕಲ್ಲಮುಂಡ್ಕೂರು ಶಾಖಾಽಕಾರಿ ಸುಭಾಸ್‌ಆಚಾರ್ಯ, ಬೆಳುವಾಯಿ ಪಿಡಿಓ ಭೀಮಾನಾಯ್ಕ ಮೊದಲಾದವರಿದ್ದರು.

Related posts

Leave a Reply

Your email address will not be published. Required fields are marked *