Header Ads
Breaking News

ಮೂಡುಬಿದಿರೆಯಲ್ಲಿ ನಡೆದ “ಮಲೇರಿಯಾ ವಿರೋಧ ಮಾಸಾಚರಣೆ ಜನಜಾಗೃತಿ ಶಿಬಿರ”

ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಂಗಳೂರು, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ “ಮಲೇರಿಯಾ ವಿರೋಧ ಮಾಸಾಚರಣೆ ಜನಜಾಗೃತಿ ಶಿಬಿರ”ವು ಗಾಂಧಿನಗರ ಕಡ್ದಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಆರಂಭಗೊಂಡಿತು. ಮೂಲ್ಕಿ-ಮೂಡುಬಿದರೆ ಕ್ಷೇತ್ರದ ಶಾಸಕ ಎ.ಉಮಾನಾಥ ಕೋಟ್ಯಾನ್ ಜನಜಾಗೃತಿ ಶಿಬಿರಕ್ಕೆ ದೀಪ ಬೆಳಗಿಸಿ ನಂತರ ಪುರಸಭಾ ಸದಸ್ಯೆ ದಿವ್ಯ ಜಗದೀಶ್ ಅವರು ಮಲೇರಿಯಾ ವಿರೋಧ ಪ್ರಚಾರಾಂದೋಲನಕ್ಕೆ ಹಸಿರು ಬಾವುಟ ಬೀಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಮಳೆಗಾಲ ಆರಂಭದ ಸನ್ನಿವೇಶದಲ್ಲಿ ಮಲೇರಿಯಾ, ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳು ಬರುತ್ತಿರುತ್ತವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಕುಡಿದು ಬಿಸಾಡಿದ ಸೀಯಾಳದ ಚಿಪ್ಪುಗಳು, ಟಯರ್‌ಗಳು, ನೀರು ತುಂಬಿರುವ ಟ್ಯಾಂಕರ್‌ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕೆಂದರು.
ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ/ಅರುಣ್ ಕುಮಾರ್ ಮತ್ತು ಜಿಲ್ಲಾ ಕೀಟ ತಜ್ಞೆ ಮಂಜುಳಾ ಅವರು ಲಾರ್ವ ಸಮೀಕ್ಷೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ದಿವ್ಯಾ ಜಗದೀಶ, ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಸೂರ್ಯಕಾಂತ ಖಾರ್ವಿ, ಪರಿಸರ ಅಭಿಯಂತರೆ ಶಿಲ್ಪಾ, ಜವನೆರ್ ಬೆದ್ರದ ಅಧ್ಯಕ್ಷ ಅಮರ್ ಕೋಟೆ, ಪತ್ರಕರ್ತರ ಸಂಘ ಮಾಜಿ ಅಧ್ಯಕ್ಷ ಧನಂಜಯ ಮೂಡುಬಿದಿರೆ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಶಾಂತಿ ಅನಿತಾ ಲೂಯಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *