Header Ads
Breaking News

ಮೂಡುಬಿದಿರೆಯಲ್ಲಿ ‘ಬಿಗ್ ಮಿಶ್ರಾ ಪೇಡಾ’ ಶುಭಾರಂಭ

ಮೂಡುಬಿದಿರೆ: ದೇಹಕ್ಕೆ ಹಿತಮಿತವಾದ ಶುದ್ಧ ಸ್ವಚ್ಛ ಆಹಾರದಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ರಾಜ್ಯ ಮಟ್ಟದಲ್ಲಿ ಆಹಾರ ಉತ್ಪನ್ನಕ್ಕೆ ಹೆಸರಾದ ಬಿಗ್ ಮಿಶ್ರಾ ಪೇಡಾ ಸಮೂಹವು ಮೂಡುಬಿದಿರೆಯ ತನ್ನ ಹೊಸ ಶಾಖೆಯಲ್ಲಿ ಗ್ರಾಹಕರ ಸಂತೃಪ್ತಿ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿ ಬೆಳೆಯುವಂತಾಗಲಿ ಎಂದು ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

ಅವರು ಸ್ವರಾಜ್ಯ ಮೈದಾನ ಜಂಕ್ಷನ್ ಬಳಿ ರಾ.ಹೆ.169ರ ಅಂಚಿನಲ್ಲಿ ಕೋಸ್ಟಲ್ ಕೋರ್ಟ್ ಬಿಲ್ಡಿಂಗ್‍ನಲ್ಲಿ ಬಿಗ್ ಮಿಶ್ರಾಸ್ ಪೇಡಾ ಕಂಪೆನಿಯ ಮೂಡುಬಿದಿರೆಯ ನೂತನ ಶಾಖೆಯನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.

ಕಿರುತೆರೆಯ ರಾಧಾರಮಣ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ವಿಶೇಷ ಅತಿಥಿಯಾಗಿ ಮಾತನಾಡಿ ಸಿಹಿ ತಿನ್ನುವ ಬಗ್ಗೆ ಆತಂಕ ಬೇಡ, ಆದರೆ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಿ ಎಂದರು.

ಮಾಜಿ ಸಚಿವರುಗಳಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ ಜೈನ್, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉದ್ಯಮಿ ಕೆ. ಶ್ರೀಪತಿ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

ಮೂಡುಬಿದಿರೆ ಶಾಖೆಯ ಪ್ರಥ್ವೀ ಜೈನ್, ಸಂಪತ್ ಪಡಿವಾಳ್, ಅಶ್ವಿನಿ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *