
ಮೂಡುಬಿದಿರೆ :ಸ್ವರಾಜ್ಯ ಮೈದಾನದ ಬಳಿ 12 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ಮತ್ತು ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮೂಡುಬಿದಿರೆಯಲ್ಲಿ ಅಮೂಲ್ಯವಾದ ಗ್ರಂಥ ಭಂಡಾರವಿದೆ. ಕನ್ನಡ ಭವನ ನಿರ್ಮಾಣದಿಂದ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಕನ್ನಡ ಪರ ಚಟುವಟಿಕೆಗಳಿಗೆ ಮೌಲ್ಯ ಬಂದಿದೆ. ಕನ್ನಡದ ಕಟ್ಟಾಳುವಾಗಿ ಮೋಹನ ಆಳ್ವ ಅವರು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸಗಳನ್ನು ಮಾಡುವ ಮೂಲಕ ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ ಎಂದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀವರ್ಚನ ನೀಡಿ, ಸ್ವಾಮೀಜಿ ಕಲೆ, ಸಾಹಿತ್ಯ ಭಾರತೀಯ ಸಂಸ್ಕøತಿಯ ಜೀವಾಳ. ಇಂತಹ ಸುಸಂಸ್ಕøತ ವಾತಾವರಣವಿರುವಲ್ಲಿ ಸಭ್ಯ ಸಮಾಜವನ್ನು ಕಾಣಬಹುದು. ಸಾಹಿತ್ತಿಕ ಚಟುವಟಿಕೆಗಳಿಗೆ ನಿರಂತರ ವೇದಿಕೆ ಒದಗಿಸುವ ಮೂಲಕ ಅವುಗಳ ಪೋಷಣೆ ಕನ್ನಡ ಭವನದ ಮೂಲಕ ಆಗಬೇಕು ಎಂದರು.
ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಸ್ವಾಗತಿಸಿದರು. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಭಾರತ ಸ್ಕೌಟ್ಸ್ ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಅಮರನಾಥ ಶೆಟ್ಟಿ ಕುರಿತ ಕೃತಿ `ಅಮರ ಸ್ಮರಣೆ’ಯನ್ನು ಬಿಡುಗಡೆಗೊಳಿಸಿ ಸಹಸ್ರಾರು ಮಂದಿಯ ಸ್ನೇಹ ಸಂಪಾದಿಸಿರುವ ಅಮರನಾಥ ಶೆಟ್ಟಿ ಅಮರವಾಗಿರಲು ಆಳ್ವರು ಕಾರಣೀಕರ್ತರಾಗಿದ್ದಾರೆ.ಸ್ಕೌಟ್ಸ್ ಗೈಡ್ಸ್ ವತಿಯಿಂದ ಮೂಡುಬಿದಿರೆ ಕನ್ನಡ ಭವನಕ್ಕೆ ರೂ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಜಿಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚಿನ ಧರ್ಮಗುರು ಫೌಲ್ ಸಿಕ್ವೇರಾ, ಜುಮ್ಮಾ ಮಸೀದಿಯ ಧರ್ಮಗುರು ಮುಸ್ತಫಾ ಯಮಾನಿ, ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಉಪಸ್ಥಿತರಿದ್ದರು.