Header Ads
Header Ads
Breaking News

ಮೂಡುಬಿದಿರೆ: ಆಳ್ವಾಸ್ ಪ.ಪೂ ಕಾಲೇಜಿನ ಕ್ಷೇಮಪಾಲನಾ ಸಂಘ. ಆಳ್ವಾಸ್‌ನ ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ ಉದ್ಘಾಟನೆ.

ಮೂಡುಬಿದಿರೆ: ಆಳ್ವಾಸ್ ಪ.ಪೂ.ಕಾಲೇಜಿನ ಕ್ಷೇಮಪಾಲನಾ ಸಂಘದ ಉದ್ಘಾಟನೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಹನಾ ಶೆಟ್ಟಿ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಮಹಿಳೆಯರು ಶಿಕ್ಷಿತರು ಹಾಗೂ ಧೈರ್‍ಯವಂತೆಯರಾಗಿರುವುದರ ಜೊತೆಗೆ ಸ್ವಾವಲಂಬಿಗಳಾಗಬೇಕು. ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ ಮಹಿಳೆಯರು ನಮಗೆ ಆದರ್ಶರಾಗಬೇಕು. ಆತ್ಮರಕ್ಷಣೆ ಹಾಗೂ ಸ್ವಚ್ಚತೆಯ ಕಡೆಗೆ ಗಮನ ಹರಿಸುತ್ತಾ ಎಂತಹ ಸಂದರ್ಭವನ್ನಾದರೂ ಎದುರಿಸುವ ಮನಸ್ಥಿತಿಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಅಬಲೆಯರಾಗಿರದೆ ತಮ್ಮ ಜ್ಞಾನಶಕ್ತಿಯನ್ನು ಬಳಸಿಕೊಂಡು ಸಬಲೆಯರಾಗಬೇಕು. ಖಿನ್ನತೆ ಹಾಗೂ ವೈಯಕ್ತಿಕ ಸಮಸ್ಯೆಗಳಷ್ಟೇ ಅಲ್ಲದೆ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹಿಳಾ ಕ್ಷೇಮಪಾಲನಾ ಸಂಘದ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.ವಿದ್ಯಾರ್ಥಿನಿಯರಾದ ಒಲ್ವಿಟಾ ಹಾಗೂ ವಿಷ್ಮಾ ಹೆಗಡೆ ಆತ್ಮರಕ್ಷಣೆ ಹಾಗೂ ಸ್ವಚ್ಛತೆಯ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಆಳ್ವಾಸ್ ಪ.ಪೂ. ಕಾಲೇಜಿನ ಆಡಳಿತಾಧಿಕಾರಿಯಾಗಿರುವ ಅಭಿನಂದನ್ ಶೆಟ್ಟಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕಿ ಡಾ.ರೂಪಾ ಭಟ್ ಉಪಸ್ಥಿತರಿದ್ದರು.

Related posts

Leave a Reply