Header Ads
Breaking News

ಮೂಡುಬಿದಿರೆ: ಜಲ ಸಂರಕ್ಷಣೆ ಮಾಹಿತಿ ಕಾರ್ಯಾಗಾರ

ಭೂಮಿ ಬ್ಯಾಂಕ್ ಇದ್ದಂತೆ. ನಾವು ನಮ್ಮ ಅಕೌಂಟ್‍ಗೆ ದುಡ್ಡು ಹಾಕಿದಾಗ ಹೇಗೆ ಹಿಂದೆ ತೆಗೆಯಲು ಸಾಧ್ಯವಾಗುತ್ತದೋ ಅದೇ ರೀತಿ ಮಳೆಯ ನೀರನ್ನು ನಾವು ಭೂಮಿಗೆ ಇಂಗಿಸುವ ಮೂಲಕ ಸಂರಕ್ಷಣೆ ಮಾಡಿದಾಗ ಭೂಮಿ ನಮಗೆ ಮತ್ತೆ ಯಥೇಚ್ಛವಾದ ನೀರನ್ನು ಹಿಂತಿರುಗಿಸುತ್ತದೆ. ನಾವಿಂದು ನೀರನ್ನು ತಾತ್ಸಾರ ಮನೋಭಾವದಿಂದ ನೋಡುತ್ತಿರುವುದರಿಂದಲೇ ನೀರಿನ ಅಭಾವ ಹೆಚ್ಚಾಗಲು ಕಾರಣವಾಗಿದೆ ಎಂದು ರೋಟರಿ ಜಿಲ್ಲಾ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಅಭಿಪ್ರಾಯಪಟ್ಟರು.

ಅವರು ಯುವ ಉತ್ಸಾಹಿ ಬಳಗ ಕೇಮಾರು ಇವುಗಳ ಆಶ್ರಯದಲ್ಲಿ ಕೇಮಾರಿನ ದತ್ತಾತ್ರೆಯ ಭಜನಾ ಮಂದಿರದಲ್ಲಿ ನಡೆದ ಜಲ ಸಂರಕ್ಷಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು ಜಿ.ಪಂ. ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ನೀರು ಅನಿವಾರ್ಯವಾಗಿ ಎಲ್ಲರಿಗೂ ಬೇಕು. ನಾವು ಎಚ್ಚರಿಕೆಯಿಂದ ಇದ್ದು ನೀರು ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದ ಅವರು ಸೇವೆಯೊಂದಿಗೆ ಮಾನವೀಯ ಮೌಲ್ಯವನ್ನು ಕೊಡುವಂತಹ ಕೆಲಸವನ್ನು ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‍ನ ಅದ್ಯಕ್ಷ ಬಿ.ಸೀತಾರಾಮ ಆಚಾರ್ಯ ವಲಯ 4ರ ರೋಟರಿ ಜಿಲ್ಲಾ ಉಪರಾಜ್ಯಪಾಲ ಎಂಪಿಎಚ್‍ಎಫ್ ಡಾ.ಯತಿಕುಮಾರ ಸ್ವಾಮಿಗೌಡ, ಕೇಮಾರು ಯುವ ಉತ್ಸಾಹಿ ಬಳಗ(ರಿ)ಇದರ ಉಪಾಧ್ಯಕ್ಷ ಬೆಳುವಾಯಿ ಪ್ರಭಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *