Header Ads
Breaking News

ಮೂಡುಬಿದಿರೆ ಶಾಸಕರಿಂದ ಬಸ್ ನಿಲ್ದಾಣ ಸಮಸ್ಯೆಗಳ ಪರಿಶೀಲನೆ. ಬಸ್ಸ್ ನಿಲ್ದಾಣಗಳಿಗೆ ಉಚಿತ ವೈಫೈ ಅನುಷ್ಠಾನಗೊಳಿಸುವುದಾಗಿ ಹೇಳಿಕೆ.

ಮೂಡುಬಿದಿರೆ : ಇಲ್ಲಿನ ಬಸ್‌ನಿಲ್ದಾಣದ ಅವ್ಯವಸ್ಥಿತ ಪಾರ್ಕಿಂಗ್, ಬಸ್ ತಂಗುದಾಣದ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಸೋರುತ್ತಿರುವುದನ್ನು ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಪರಿಶೀಲಿಸಿದರು.ಅವರು ನಮೋ ಬ್ರಿಗೇಡ್ ಆಹ್ವಾನದ ಮೇರೆಗೆ ಬಸ್‌ನಿಲ್ದಾಣದ ಸಮಸ್ಯೆಗಳನ್ನು ಆಲಿಸಲು ಬಂದಿದ್ದು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪುರಸಭೆ, ಪೊಲೀಸ್ ಅಧಿಕಾರಿಗಳು ಹಾಗೂ ವಾಹನ ಮಾಲಕರು ಮತ್ತು ಇಲ್ಲಿನ ವ್ಯಾಪಾಸ್ಥರ ಜಂಟಿ ಸಭೆ ಕರೆದು ಚರ್ಚಿಸಿಲಾಗುವುದು.

ಬಸ್ ನಿಲ್ದಾಣಗಳಲ್ಲಿ ಬಹಳಷ್ಟು ಜನ ಸ್ವ ಉದ್ಯೋಗ ಮಾಡುವುದರೊಂದಿಗೆ ಶಾಲಾ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇಲ್ಲಿ ಇಂಟರ್‌ನೆಟ್ ಬಳಕೆಗಾಗಿ ವೈಫೈ ಅವಶ್ಯಕತೆಯಿದ್ದು ಮೂಡುಬಿದಿರೆ, ಮುಲ್ಕಿ, ಬಜ್ಪೆ ಬಸ್ಸ್ ನಿಲ್ದಾಣಗಳಿಗೆ ಉಚಿತ ವೈಫೈ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಮೂರು ತಿಂಗಳೊಳಗೆ ಅನುಷ್ಠಾನಗೊಳಿಸುವುದಾಗಿ ಅವರು ತಿಳಿಸಿದರು.ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಲಕ್ಷ್ಮಣ ಪೂಜಾರಿ, ಉದ್ಯಮಿ ಮೇಘನಾಥ ಶೆಟ್ಟಿ ಹೊಸಬೆಟ್ಟು ಪಂ. ಸದಸ್ಯ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply