
ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸಾದ್ಕುಮರ್ ಅವರನ್ನು ಸವಿತಾ ಸಮಾಜದ ವತಿಯಿಂದ ಮೂಡುಬಿದಿರೆ ಸಮಾಜಮಂದಿರದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂರವರು ಪ್ರಸಾದ್ಕುಮಾರ್ನ್ನು ಸನ್ಮಾನಿಸಿ ಮಾತನಾಡಿ ಸವಿತಾ ಸಮಾಜವು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಅವಿನಾಭವ ಸಂಬಂಧ ಹೊಂದಿದೆ ಎಂದ್ರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸವಿತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್, ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಬೆಳ್ಳೂರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಸವಿತಾ ಸಮಾಜ ನಿಗಮದ ಅಧ್ಯಕ್ಷರನ್ನಾಗಿ ಆನಂದ ಭಂಡಾರಿಯವರನ್ನು ನೇಮಿಸಬೇಕೆಂಬ ಮನವಿ ಪತ್ರವನ್ನು ಸುದರ್ಶನ ಅವರಿಗೆ ನೀಡಲಾಯಿತು.