Header Ads
Header Ads
Breaking News

ಮೂರು ದಶಕಗಳಿಂದ ಕಾರ್ಯಕಲ್ಪಕ್ಕೆ ಕಾಯುತ್ತಿದೆ ಮೂಡುಬಿದಿರೆ ನೇರಳಕಟ್ಟೆ ರಸ್ತೆ

ಮೂಡುಬಿದಿರೆ ವ್ಯಾಪ್ತಿಯ ಇರುವೈಲು ಗ್ರಾ.ಪಂಚಾಯತ್ ವ್ಯಾಪ್ತಿಗೆ ಸೇರಿರುವ, ಮೂಡುಬಿದಿರೆಯಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಮಾಸ್ತಿಕಟ್ಟೆಯಿಂದ ತೋಡಾರಿಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯ ನೇರಳೆಕಟ್ಟೆಯಿಂದ ಪೂಜಾರಬೆಟ್ಟು ತನಕ ಹಾದು ಹೋಗುವ ರಸ್ತೆಯು ತೀರ ಹದಗೆಟ್ಟಿದ್ದು ವಾಹನ ಹಾಗೂ ಪಾದಚಾರಿಗಳ ಸಂಚಾರವು ನರಕ ಸದೃಶವಾಗಿದೆ.

ಇದು ಇರುವೈಲು ಪಂಚಾಯತ್ ಅಧ್ಯಕ್ಷೆ ನವೀನಾ ಅವರ ವಾರ್ಡ್ ಆಗಿದ್ದು, ಕಳೆದ ಮೂರು ದಶಕಗಳಿಂದ ಡಾಂಬರು ಕಾಣದೆ ಹಿಂದೆ ಹಾಕಿರುವ ಡಾಂಬರು ಎದ್ದು ಹೋಗಿ ರಸ್ತೆಯ ತುಂಬೆಲ್ಲಾ ಜಲ್ಲಿ ಕಲ್ಲುಗಳು ರಾಶಿ ಬಿದ್ದಿದ್ದಲ್ಲದೆ ರಸ್ತೆಯಲ್ಲಿ ಹೊಂಡಗಳೇ ಎದ್ದು ಕಾಣುತ್ತಿವೆ. ಇಳಿಜಾರಿನ ರಸ್ತೆ ಭಾಗದಲ್ಲೇ ಹೆಚ್ಚು ಹದಗೆಟ್ಟಿರುವುದರಿಂದ ಅಪಯಾಕಾರಿ ರಸ್ತೆಯಾಗಿಯೂ ಪರಿವರ್ತನೆಗೊಂಡಿದೆ. ವಾಹನ ಚಾಲಕರು ತಮ್ಮ ವಾಹನವನ್ನು ಚಲಾಯಿಸಿಕೊಂಡು ಹೋಗಲು ಹೆದರುತ್ತಿದ್ದಾರೆ. ಅಲ್ಲದೆ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಯಿಂದಾಗಿ ಗ್ರಾಮಸ್ಥರು ಪ್ರತಿದಿನ ಸಂಕಷ್ಟಪಡುವಂತ ಸ್ಥಿತಿಯುಂಟಾಗಿದೆ.
ಇಲ್ಲಿ ಬೆಳಿಗ್ಗೆ ಸಂಜೆ ವೇಳೆಗೆ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಎಂಟು ಬಸ್ಸುಗಳು, ಆಟೋ, ದ್ವಿಚಕ್ರ ವಾಹನಗಳು ಹೋಗುತ್ತಿದ್ದು, ಹೆತ್ತವರು ತಮ್ಮ ಮಕ್ಕಳು ಈ ರಸ್ತೆಯ ಮೂಲಕ ಸುರಕ್ಷಿತವಾಗಿ ಮನೆ ತಲುಪುವರೆಗೆ ಕಾಯುತ್ತಾ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಇರುವೈಲು ಗ್ರಾ.ಪಂ ಅಧ್ಯಕ್ಷೆ ನವೀನಾ ಅವರ ಮನೆ ಕೂಡ ಪೂಜಾರಬೆಟ್ಟು ಪರಿಸರದಲ್ಲಿದೆ. ಹೆಚ್ಚಿನ ಎಲ್ಲ ಗ್ರಾಮಸಭೆಗಳಲ್ಲಿ, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಯಾವುದೇ ಸ್ಪಂದನೆಯಿಲ್ಲದಾಗಿದ್ದು, ವಾಹನ ಸವಾರರಿಗೆ ರಸ್ತೆ ನರಕ ದರ್ಶನ ನೀಡುತ್ತಿದೆ. ಈ ರಸ್ತೆಯ ಬಗ್ಗೆ ಗ್ರಾಮಸ್ಥರಾದ ಪೂಜಾರಬೆಟ್ಟಿನ ಕೊರಗಶೆಟ್ಟಿ ಸಹಿತ ಇತರರು ಧ್ವನಿ ಎತ್ತಿದ್ದು ಆದಷ್ಟು ಬೇಗ ಪಂಚಾಯತ್‌ನವರು ಈ ರಸ್ತೆಯನ್ನು ಸರಿಪಡಿಸಿ ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.

Related posts

Leave a Reply

Your email address will not be published. Required fields are marked *