Header Ads
Breaking News

ಮೂಳೂರಿನ ಅಧ್ವಾನ ಹೋಟೆಲ್‌ನ ಶೌಚಾಲಯ, ತ್ಯಾಜ್ಯನೀರನ್ನು ಹೆದ್ದಾರಿಗೆ ಸುರಿದ ಪಾಪಿಗಳು : ಸಾರ್ವಜನಿಕರಿಂದ ಭಾರೀ ಆಕ್ರೋಶ..!

ಒಂದೆಡೆ ಗಬ್ಬೆದ್ದು ನಾರ್‍ತಾ ಇರೋ ಡೈನೇಜ್ ನೀರು, ಇನ್ನೊಂದು ಕಡೆ ಸೊಳ್ಳೆಗಳ ಬ್ರೇಕ್ ಡ್ಯಾನ್ಸ್, ಮತ್ತೊಂದು ಕಡೆ ರಾರಾಜಿಸ್ತಾ ತ್ಯಾಜ್ಯಗಳ ರಾಶಿ.. ಅಬ್ಬಾ..ಒಂದಾ ಎರಡಾ ಹೇಳ್ತಾ ಹೋದ್ರೆ ಸಮಸ್ಯೆಗಳ ಸರಮಾಲೆ. ಅಷ್ಟಕ್ಕೂ ಈ ಸಮಸ್ಯೆ ಉಂಟಾಗಿದ್ದು ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಒಂದು ಹೊಟೇಲ್‌ನಿಂದಾಗಿ. ಹಾಗಾದ್ರೆ ಹೇಗೆ ಈ ಸಮಸ್ಯೆ ಉಂಟಾಯಿತು. ಏನು ಕಥೆ? ಇಲ್ಲಿದೆ ನೋಡಿ..ಒಂದು ಸ್ಪೆಷಲ್ ರಿಪೋರ್ಟ್..

ಹೌದು.. ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಿರ್ಚಿ ಹೆಸರಿನ ಹೋಟೆಲ್ ಡ್ರೈನೇಜ್ ನೀರು ಸಹಿತ ಶೌಚಾಲಯದ ತ್ಯಾಜ್ಯವನ್ನು ರಾತ್ರೋರಾತ್ರಿ ಹೆದ್ದಾರಿ ಬದಿಗೆ ಸುರಿಯಲು ಮುಂದಾಗಿದೆ. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಹೆದ್ದಾರಿ ಇಕ್ಕೆಲಿಗೆ ತಂದು ಸುರಿಯುತ್ತಿದ್ದಾಗ ಹೆದ್ದಾರಿ ಗಸ್ತು ವಾಹನವನ್ನು ಕಂಡು ವಾಹನದಲ್ಲಿದ್ದ ಮೂರುಮಂದಿ ಪಾಪಿಗಳು ಪರಾರಿಯಾಗಿದ್ದಾರೆ. ಬಜಪೆಯ ಶರೀಫ್ ಎಂಬಾತನಿಗೆ ಸೇರಿದ ವಾಹನದಲ್ಲಿ, ಚಾಲಕ ಸಹಿತ ಮೂರು ಮಂದಿ ಮೂಳೂರಿನ ಮಿರ್ಚಿ ಹೋಟೆಲಿನ ತ್ಯಾಜ್ಯವನ್ನು ದೇವಸ್ಥಾನದ ಬಳಿ ಸುರಿಯುತ್ತಿದಾಗ ಹೆದ್ದಾರಿ ಗಸ್ತು ವಾಹನದ ಕಣ್ಣಿಗೆ ಬಿದ್ದಿದ್ದಾರೆ, ಅವರನ್ನು ಕಂಡ ಮೂವರೂ ಪಾಪಿಗಳು ಪರಾರಿಯಾಗಿದ್ದು, ಈ ವಿಚಾರ ತಿಳಿಯುತ್ತಿದಂತ್ತೆ ಘಟನಾ ಸ್ಥಳದಲ್ಲಿ ಜನ ಸೇರ ತೊಡಗಿದ್ದು ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ.

ಇನ್ನು ಈ ದುರ್ನಾತ ತ್ಯಾಜ್ಯದಿಂದಾಗಿ ಬಹುತೇಕ ಮಂದಿ ಮೂಗಿಗೆ ಬಟ್ಟೆಕಟ್ಟಿ ನಿಲ್ಲುವಂತ್ತಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ಸಾಗಿಸುವ ತಯಾರಿಯಲ್ಲಿರುವಾಗ, ಈ ಕೃತ್ಯ ಎಸಗಿದ ಪಾಪಿಗಳನ್ನು ಸ್ಥಳಕ್ಕೆ ಕರೆಸುವಂತ್ತೆ ಜನ ಒತ್ತಾಯಿಸಿದ್ದಾರೆ. ಅವರನ್ನು ಸಮಾಧಾನ ಪಡಿಸಿದ ಪಡುಬಿದ್ರಿ ಎಸ್ಸೈ ಸುಬ್ಬಣ್ಣ ವಾಹನವನ್ನು ವಶಕ್ಕೆ ಪಡೆದು ಈ ತ್ಯಾಜ್ಯ ಸುರಿದವರಿಂದಲೇ ಈ ಭಾಗದಲ್ಲಿನ ಎಲ್ಲಾ ತ್ಯಾಜ್ಯಗಳನ್ನು ತೆಗೆಸಿ ಪರಿಸರವನ್ನು ಶುದ್ಧಿಕರಿಸಿದ ಬಳಿಕವೇ ವಾಹನವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದ ಬಳಿಕ ಜನ ತಣ್ಣಗಾಗಿದ್ದಾರೆ.

ಇನ್ನು ವಾಹನ ಮಾಲಕರಿಗೆ ಕರೆ ಮಾಡಿ ಆತನ ಮೂಲಕ ಪರಾರಿಯಾದ ಪಾಪಿಗಳನ್ನು ಪತ್ತೆ ಅವರಲ್ಲೋಬ್ಬನಿಂದಲೇ ವಾಹನವನ್ನು ಠಾಣೆಗೆ ಸಾಗಿಸಿದನ್ನು ವಿರೋಧಿಸಿದ ಸಾರ್ವಜನಿಕರು, ಆರೋಪಿಗಳನ್ನು ರಕ್ಷಿಸುವ ಕೆಲಸವಾಗುತ್ತಿದೆ. ಸಾರ್ವಜನಿಕರನ್ನು ಕತ್ತಲ್ಲಿಟ್ಟು ತಪ್ಪೆಸಗಿದ ಒಂದು ವರ್ಗದ ಮಂದಿಯನ್ನು ರಕ್ಷಣೆ ಮಾಡುವುದು ಸರಿಯಲ್ಲ, ಈ ಭಾಗವನ್ನು ಸ್ವಚ್ಚಗೊಳಿಸುವುದು ಮಾತ್ರವಲ್ಲ ವಾಹನ ಮಾಲಕ ಸಹಿತ, ಮೂಳೂರಿನ ಹೋಟೆಲ್ ಮಾಲಿಕ ಹಾಗೂ ವಾಹನದಿಂದ ಪರಾರಿಯಾದ ಆ ಮೂವರು ಪಾಪಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತ್ತೆ ಆಗ್ರಹಿಸಿದ್ದಾರೆ. ಜನ ಗುಂಪು ಸೇರಿದಾಗ ಆರೋಪಿ ಯಾರೇ ಇರಲೀ ಅವರನ್ನು ರಕ್ಷಿಸಿ ಠಾಣೆಗೆ ಕರೆದ್ದೋಯ್ಯ ಬೇಕಾಗಿದ್ದು ಅನಿರ್ವಾಯ, ನಾವು ಅದನ್ನೇ ಮಾಡಿದ್ದೇವೆ. ನಮ್ಮ ಇತಿ-ಮಿತಿಯೋಳಗೆ ಆರೋಪಗಳ ವಿರುದ್ಧ ಏನು ಕ್ರಮ ಕೈಗೊಳ್ಳ ಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ ಪಡುಬಿದ್ರಿ ಪೊಲೀಸರು.

Related posts

Leave a Reply

Your email address will not be published. Required fields are marked *