
ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ನಾರಾಯಣಗುರು ಮಂದಿರಕ್ಕೆ ತಡರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಕಾಣಿಕೆ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ. ಪೂಜೆಗಾಗಿ ಅರ್ಚಕ ಬೆಳಗ್ಗಿನ ಜಾವ ಮಂದಿರಕ್ಕೆ ಬರುವ ಸಮಯದಲ್ಲಿ ಈ ಘಟನೆ ನೋಡಿ ಕಾಪು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಾಪು ಪೆÇಲೀಸ್ ಪರಿಶೀಲನೆ ನಡೆಸುತ್ತಿದ್ದಾರೆ.