Header Ads
Breaking News

ಮೃತಪಟ್ಟವರ ಹೆಸರಿನಲ್ಲೂ ಮತದಾನ ನಡೆದಿದೆ : ಮಾಜಿ ಸಚಿವ ರಮಾನಾಥ ರೈ ಗಂಭೀರ ಆರೋಪ

ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತದ ನೂತನ ಆಡಳಿತ ಮಂಡಳಿ ಚುನಾವಣೆ ಸಂದರ್ಭ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಮೃತಪಟ್ಟವರ ಹೆಸರಲ್ಲೂ ಮತದಾನ ನಡೆದಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.

ಬಿ.ಸಿ.ರೋಡಿನ ಕಾಂಗ್ರೆಸ್ ಪಕ್ಷ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅರ್ಹತೆ ಇದ್ದವರಿಗೆ ಮತದಾನ ನೀಡುವ ಬದಲು ಅನರ್ಹರಿಗೆ ಅವಕಾಶ ಕೊಟ್ಟಿರುವುದು ತನ್ನ ರಾಜಕೀಯ ಜೀವನದಲ್ಲಿ ನೋಡಿದ್ದು ಮೊದಲು ಎಂದರು.

ಕಳೆದ ಅವಧಿಯಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸುದರ್ಶನ ಜೈನ್ ಮಾತನಾಡಿ, 874 ಮಂದಿಯ ರಿಟ್ ಪಿಟಿಶನ್ ಆಧಾರದಲ್ಲಿ ಮತದಾನ ಹಕ್ಕು ಚಲಾವಣೆ ಕುರಿತು ಕೋರ್ಟ್ ಮೂಲಕ ಆದೇಶ ಪಡೆದಿದ್ದರು. ಆದರೆ ಅವರಲ್ಲಿ ಸದಸ್ಯರಲ್ಲದವರೂ ಇದ್ದಾರೆ. 634 ಮಂದಿಗೆ ಬ್ಯಾಂಕಿನ ಷೇರ್ ಇಲ್ಲ, ಬ್ಯಾಂಕಿಗೆ ಸಂಬಂಧವೇ ಇಲ್ಲದವರು ಹೇಗೆ ಮತದಾನ ಮಾಡಿದರು ಎಂದು ಪ್ರಶ್ನಿಸಿದರು. ಇವರ ಪೈಕಿ 22 ಮಂದಿ ಮೃತಪಟ್ಟವರು ಎಂಬ ಅಂಶ ನಮಗೆ ಗೊತ್ತಾಗಿದೆ ಎಂದವರು ತಿಳಿಸಿದರು.

ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಜ.25 ರಂದು ನಡೆದ ಚುನಾವಣೆಯಲ್ಲಿ ಬ್ಯಾಂಕಿನ ಮರಣ ಹೊಂದಿರುವ ಸದಸ್ಯರು,ಸಾಲ ಸುಸ್ತಿದಾರರು,ಅನರ್ಹರ ಹೆಸರಿನಲ್ಲಿ ಮತದಾನ ಮಾಡಲಾಗಿದೆ ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಜಿಪಂ ಸದಸ್ಯ ಪದ್ಮಶೇಖರ ಜೈನ್, ಪ್ರಮುಖರಾದ ಪರಮೇಶ್ವರ ಮೂಲ್ಯ, ಸುಭಾಶ್ಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *