
ಮಂಗಳೂರು ವಿದಾನಸಭಾ ಕ್ಷೇತ್ರ ಬ್ರಹ್ಮಶ್ರೀ ಬಿಲ್ಲವ ವೇದಿಕೆಯಿಂದ ಕಾಪಿಕಾಡ್ ಗಟ್ಟಿ ಸಮಾಜ ಭವನದಲಿ ‘ಮೆರುಗು-2021’ ಪ್ರತಿಭಾ ಅನಾವರಣದ ಹೊಸ್ತಿಲು, ಆಯುಶ್ಮಾನ್ ಕಾರ್ಡ್ ಮತ್ತು ಶಾಲಾ ಶುಲ್ಕ ವಿತರಣಾ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿ, ಒಂದೇ ದೇವರು, ಜಾತಿ, ಕುಲ ಎನ್ನುವ ಘೋಷದ ಮೂಲಕ ಮಾನವರಲ್ಲಿ ದೇವನನ್ನು ಕಂಡು, ಭೂಮಿಯಲ್ಲಿ ಹುಟ್ಟಿದ ಕಟ್ಟಕಡೇಯ ವ್ಯಕ್ತಿಗೂ ದೇವರನ್ನು ಕಾಣಲು ಸಾಧ್ಯ ಎನ್ನುವುದನ್ನು ನಾರಾಯಣ ಗುರುಗಳು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದ್ರು.
ಈ ವೇಳೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ಬಂಟರ ಸಂಘದ ಅಧ್ಯಕ್ಷ ಸುರೇಶ್ ಚೌಟ, ಮಂಗಳೂರು ವಿಶ್ವವಿದ್ಯಾಲಯ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ.ಗಣೇಶ್ ಸಂಕಮಾರ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಮತ್ತಿತರರು ಉಪಸ್ಥಿತರಿದ್ದರು.