Header Ads
Breaking News

ಮೆಸ್ಕಾಂ ವಂಚನೆಗಳ ವಿರುದ್ಧ ಡಿವೈಎಫ್‌ಐ ನೇತೃತ್ವದಲ್ಲಿ ಧರಣಿ

ನಿರಂತರವಾಗಿ ಏರುತ್ತಿರುವ ವಿದ್ಯುತ್ ದರ ಇಳಿಸಲು ಒತ್ತಾಯ ಹಾಗೂ ಹೆಚ್ಚುವರಿ ಡಿಪಾಸಿಟ್ , ತಪ್ಪು ಲೆಕ್ಕಚಾರ ಮುಂತಾದ ಮೆಸ್ಕಾಂ ವಂಚನೆಗಳ ವಿರುದ್ಧ ಮಂಗಳೂರಲ್ಲಿ ಪ್ರತಿಭಟನೆ ನಡೆಯಿತು. ನಗರದ ಕಾವೂರು ಮೆಸ್ಕಾಂ ಕಚೇರಿ ಮುಂಭಾದಲ್ಲಿ ಡಿವೈಎಫ್‌ಐ ಕಾವೂರು ವಿಭಾಗದ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯಿತು. ಈ ವೇಳೆ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ .ಇಮ್ತಿಯಾಜ್ , ಇಂತಹ ಲೂಟಿಯನ್ನ ಜನಸಾಮಾನ್ಯರು ಯಾವುದೇ ಕಾರಣಕ್ಕೆ ಸಹಿಸಬಾರದು. ಏರಿಸಿದ ವಿದ್ಯುತ್ ದರ ಇಳಿಸಬೇಕು. ತಪ್ಪು ಲೆಕ್ಕಾಚಾರ, ನಿಯಮಬಾಹಿರ ಡಿಪಾಸಿಟ್ ಸಂಗ್ರಹವನ್ನ ಕೈಬಿಡಬೇಕೆಂದು ಅವರು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ, ಮೆಸ್ಕಾಂನಲ್ಲಿ ಖಾಲಿ ಇರುವ ಹುದ್ದೆಯನ್ನ ಭರ್ತಿ ಮಾಡುವ ಕೆಲಸ ಮಾಡುತ್ತಿಲ್ಲ, ನಿಯಮಬಾಹಿರ ಡಿಪಾಸಿಟ್ ಸಂಗ್ರಹವನ್ನ ಕೈಬಿಡಬೇಕು.ಮೆಸ್ಕಾಂನಲ್ಲಿ ಭ್ರಷ್ಠಾಚಾರ ಜಾಸ್ತಿ ಆಗುತ್ತಿದೆ ಎಂದು ಆರೋಪಿಸಿದರು.

Related posts

Leave a Reply

Your email address will not be published. Required fields are marked *