Header Ads
Breaking News

ಮೇಘಾಲಯ ಲಿವಿಂಗ್ ರೂಟ್ ಮಾದರಿಯ ನಿಸರ್ಗ ಸೇತುವೆ ನಿರ್ಮಾಣ :”ಸೇತು ಬಂಧ” ಅಭಿಯಾನದಡಿ ಸೇತುವೆ ನಿರ್ಮಾಣ ಕಾರ್ಯ

ನದಿ, ತೊರೆ ಅಂದ ಮೇಲೆ ಅತ್ತ ಇತ್ತ ಓಡಾಡೋಕೆ ಅದಕ್ಕೊಂದು ಸೇತುವೆ ಬೇಕೆ ಬೇಕು. ಇತ್ತೀಚಿನ ದಿನಗಳಂತೂ ಮರದ ಸೇತುವೆ ಮಾಯವಾಗಿ ಕಾಂಕ್ರೀಟ್ ಸೇತುವೆಗಳದ್ದೆ ಕಾರುಬಾರು. ಆದ್ರೆ ಇಲ್ಲೊಂದು ತಂಡ ಪ್ರಾಕೃತಿಕ ವಸ್ತಗಳನ್ನೇ ಬಳಸಿಕೊಂಡು ಅಂದವಾದ ಮೇಘಾಲಯ ಲಿವಿಂಗ್ ರೂಟ್ ಮಾದರಿಯ ನಿಸರ್ಗ ಸೇತುವೆ ನಿರ್ಮಾಣ ಮಾಡ್ತಿದೆ.. ಹಾಗಾದ್ರೆ ಬನ್ನಿ ಅ ನಿಸರ್ಗ ಸೇತುವೆ ಹೇಗಿದೆ? ಎಲ್ಲಿ ನಿರ್ಮಾಣಗೊಂಡಿದೆ? ಅನ್ನೋದನ್ನು ನೋಡ್ಕೊಂಡು ಬರೋಣ..

ದಿನವಿಡೀ ಸುರಿಯುವ ಧಾರಾಕಾರ ಮಳೆ.. ಗುಡ್ಡ ಪ್ರದೇಶದಲ್ಲಿ ಹರಿಯುನ ಝರಿ, ತೊರೆಗಳು.. ಹಚ್ಚ ಹಸುರಿನ ದಟ್ಟ ಕಾಡು, ವಾವ್ ಎಷ್ಟು ಚಂದ ಅಲ್ವಾ.. ಆದ್ರೆ ರಭಸವಾಗಿ ಹರಿಯುವ ಈ ತೊರೆಗಳನ್ನು ದಾಟುವುದೇ ದೊಡ್ಡ ಸಾಹಸ.. ಇದಕ್ಕಂತಲೇ ಕಾಂಕ್ರೀಟ್ ಸೇತುವೆ ಬಂದು ಮರದ ಸೇತುವೆ ಕಾಣ ಸಿಗೋದು ತೀರಾ ಅಪರೂಪ. ಮರದ ಸೇತುವೆ ನಿರ್ಮಾಣ ಮಾಡುವವರು ಗ್ರಾಮೀಣ ಭಾಗದಲ್ಲೂ ವಿರಳವಾಗಿದ್ದಾರೆ ಕಾಂಕ್ರೀಟ್ ಕಾಡುಗಳಿಂದ ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಸೌಂದರ್ಯಕ್ಕೆ ಹೊಸ ರೂಪ ನೀಡಿ, ಮರದ ಸೇತುವೆ ನಿರ್ಮಾಣ ಮಾಡುವ ಗ್ರಾಮೀಣ ಕೌಶಲವನ್ನು ಉತ್ತೇಜಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಮಣ್ಣಪಾಪು ಮನೆ ಹಾಗೂ ಪ್ರಾಚಿ ಪ್ರತಿಷ್ಟಾನ ವತಿಯಿಂದ “ಸೇತು ಬಂಧ” ಎನ್ನುವ ಅಭಿಯಾನ ಶುರುಮಾಡಿ, ಗ್ರಾಮೀಣ ಭಾಗದ ತೊರೆಗಳಿಗೆ ಮೇಘಾಲಯ ಲಿವಿಂಗ್ ರೂಟ್ ಮಾದರಿಯ ನಿಸರ್ಗ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ…

ಜೀವನದ ಜಂಜಾಟ, ಆದುನಿಕ ಶೈಲಿ ಇವುಗಳಿಂದ ನಮ್ಮಲ್ಲಿನ ಕೌಶಲ್ಯ ನಶಿಸಿ ಹೋಗುತ್ತಿರು ಈ ಕಾಲಘಟ್ಟದಲ್ಲಿ ಪ್ರತಿಷ್ಟಾನದವರು ಸ್ಥಳೀಯವಾಗಿ ಸಿಗುವ ಅಡಕೆ ಮರ ಹಾಗೂ ಇತರೆ ಕಾಡಿನ ಬೀಳುಗಳನ್ನು ಬಳಸಿ ಆಕರ್ಷಕವಾಗಿ ಮರದ ಸೇತುವೆ ನಿರ್ಮಾಣ ಮಾಡುತ್ತಿದ್ದು, ಕಾರ್ಕಳ ತಾಲೂಕಿನ ಮಾಳ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಇಂತಹ ಮೇಘಾಲಯ ಮಾದರಿ ಸೇತುವೆ ನಿರ್ಮಾಣ ಮಾಡುವ ಉದ್ದೇಶ ಪ್ರತಿಷ್ಟಾನದ್ದು. ಮಕ್ಕಳು ನಡುದುಕೊಂಡು ಹೋಗುವಾಗ ಯಾವುದೇ ಅಪಾಯ ಸಂಭವಿಸದಂತ ಸೇತುವೆ, ಜಾನುವಾರುಗಳಿಗೂ ಹೋಗಲು ಅನುಕೂಲ ಆಗುವ ಸೇತುವೆ ಹೀಗೆ ಬೇರೆ ಬೇರೆ ರೀತಿಯಲ್ಲಿ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ.. ಸದ್ಯ ಮಾಳ ಪರಿಸರದಲ್ಲೇ ಸೇತುವೆ 30 ಅಡಿ ಉದ್ದ ಹಾಗೂ 3 ಅಡಿ ಅಗಲದ ಸೇತುವೆ ನಿರ್ಮಾಣ ಮಾಡಿದ್ದು ಎರಡು, ಅವಶ್ಯಕತೆ ಇದ್ದವರು ತಿಳಿಸಿದ್ರೆ ಅವರಿಗೂ ನಿರ್ಮಿಸಿ ಕೊಡುವ ಇಚ್ಚೆ ಹೊಂದಿದ್ದಾರೆ..

ಒಟ್ಟಾರೆಯಾಗಿ ಕಾಂಕ್ರೀಟ್ ಸೇತುವೆಗಳೇ ಹೆಚ್ಚಾಗಿರುವಾಗ, ಪ್ರಾಕೃತಿಕವಾಗಿ ಸಿಗುವ ವಸ್ತುಗಳು ಬಳಸಿ ಸೇತುವೆ ನಿರ್ಮಾಣ ಮಾಡುದ್ದರಿಂದ ಗ್ರಾಮೀಣ ಕೌಶಲಗಳ ಬೆಳೆದಂತಾಗಿ ನೋಡುದಕ್ಕೂ ಆಕರ್ಷಕವಾಗಿ ಕಾಣುತ್ತೆ..

Related posts

Leave a Reply

Your email address will not be published. Required fields are marked *