Header Ads
Breaking News

ಮೇ.19ರಿಂದ 26ರವರೆಗೆ ಹೊಸಬೆಟ್ಟುವಿನ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಬ್ರಹ್ಮಕಲಶೋತ್ಸವ

ಹೊಸಬೆಟ್ಟುವಿನಲ್ಲಿರುವ ನವ ವೃಂದಾವನ ಸೇವಾ ಪ್ರತಿಷ್ಠಾನ ಮತ್ತು ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಬ್ರಹ್ಮಕಲಶೋತ್ಸವ ಮೇ 19ರಂದು ನಡೆಯಲಿದ್ದು ಆ ಪ್ರಯುಕ್ತ ಪೂರ್ವ ಸಿದ್ಧತಾ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿದೆ.
ಹೊಸಬೆಟ್ಟುವಿನಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ಮೇ ತಿಂಗಳ 19ರಿಂದ 26ರ ವರೆಗೆ ಪ್ರತಿದಿನ ಧಾರ್ಮಿಕ ಸಭೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಆ ಪ್ರಯುಕ್ತ ಈಗಾಗಲೇ ಸಿದ್ಧತೆಯನ್ನು ಸಮಿತಿ ಮಾಡಿಕೊಂಡಿದೆ.
ಈ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿಯ ವ್ಯವಸ್ಥಾಪನಾ ಸಮಿತಿ ಸಂಚಾಲಕರಾದ ಪುಂಡಲೀಕ ಹೊಸಬೆಟ್ಟು ಅವರು ಮಾತನಾಡಿ, ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬ್ರಹ್ಮಕಲಶಾಬಿಷೇಕ ಹಮ್ಮಿಕೊಂಡಿದ್ದು, ಪ್ರಗತಿ ಕಾರ್ಯಗಳು ಈಗಾಗಲೇ ನಡೆಯುತ್ತಿದೆ. ಅನ್ನ ಸಂತರ್ಪಣೆ, ಪಾಕಶಾಲೆ, ಉಗ್ರಾಣ ಧಾರ್ಮಿಕ ಸಭಾ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ಈಗಾಗಲೇ ಎಲ್ಲಾ ಕಾರ್ಯಕ್ರಮಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

ಆನಂತರ ಕೋಶಾಧಿಕಾರಿ ರಾಘವೇಂದ್ರ ಎಚ್.ವಿ. ಅವರು ಮಾತನಾಡಿ, ಇತಿಹಾಸದಲ್ಲೇ ಪ್ರಥಮ ಬಾರಿಗೆ ಶ್ರೀ ಗುರುರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ನಡೆಯಲಿದೆ. ನಿರ್ಮಾಣಗೊಂಡಂತಹ ಗೋಪುರದ ಉದ್ಘಾಟನೆಯನ್ನು ಪುತ್ತಿಗೆ ಮಠಾಧೀಶರಾದ ಸುಗಣೇಂದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ನೆರವೇರಲಿದೆ ಎಂದು ಹೇಳಿದರು.

ಈ ಸಂದರ್ಭ ಕಾರ್ಯಧ್ಯಕ್ಷರಾದ ಪಿ.ಹೆಚ್. ಆನಂದ್, ಅಧ್ಯಕ್ಷರಾದ ವಿಶ್ವೇಶ್ವರ ಬದವಿದೆ ಹೊಸಬೆಟ್ಟು, ಹರೀಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *