Header Ads
Breaking News

ಮೇ 4 ರಂದು ನವಭಾರತ ಯಕ್ಷಗಾನ ಅಕಾಡೆಮಿಯ ಪಂಚಮ ವರ್ಧಂತ್ಯುತ್ಸವ

ನವಭಾರತ ಎಜ್ಯುಕೇಶನ್ ಸೊಸೈಟಿ, ನವಭಾರತ ಯಕ್ಷಗಾನ ಅಕಾಡೆಮಿಯ ಪಂಚಮ ವರ್ಧಂತ್ಯುತ್ಸವ ಸಮಾರಂಭವು ಮೇ 4 ರಂದು ನಡೆಯಲ್ಲಿದ್ದು ಇದರ ಪ್ರಯುಕ್ತ ಯಕ್ಷಗಾನ ನಡೆಯಲಿದೆ ಎಂದು ನವಭಾರತ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ವಾಮನ ಶೆಣೈ ತಿಳಿಸಿದರು.

ಮಂಗಳೂರಿನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಅನೇಕ ವರ್ಷಗಳಿಂದ ನವಭಾರತ ರಾತ್ರಿ ಪ್ರೌಢ ಶಾಲೆಯು ಅನೇಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತ ಬಂದಿದ್ದು ಕಳೆದ ಐದು ವರ್ಷಗಳಿಂದ ನವಭಾರತ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತ ಬಂದಿದೆ ಎಂದರು.
ಮೇ4 ರಂದು ಅಪರಾಹ್ನ 3 ಗಂಟೆಗೆ ನಗರದ ಬಾಲಂ ಭಟ್ ಹಾಲ್‌ನಲ್ಲಿ ಶ್ರೀ ಸತ್ಯ ನಾರಾಯಣ ಸ್ವಾಮಿ ವ್ರತ ಮಹಾತ್ಮೆ ತಾಳಮದ್ದಳೆಯು ನಡೆಯಲಿದ್ದು ಸಾಯಂಕಾಲ 6ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ, ಬಳಿಕ ನವಭಾರತ ಯಕ್ಷಗಾನ ಅಕಾಡೆಮಿಯ ಸದಸ್ಯರಿಂದ ಶ್ರೀ ದೇವಿ ಮಹಿಷಮರ್ದಿನಿ ಯಕ್ಷಗಾನ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಪುನರೂರು, ರವಿ ಅಲೆವೂರಾಯ, ರಘುರಾಮ್ ರಾವ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *