Header Ads
Header Ads
Breaking News

ಮೈದುಂಬಿ ಹರಿಯುತ್ತಿರುವ ನೇತ್ರಾವತಿ

ಬಂಟ್ವಾಳ: ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆಯವರೆಗೆ ಸುರಿದ ಭಾರಿ ಮಳೆಗೆ ಜಿಲ್ಲೆಯ ಜೀವನದಿ ನೇತ್ರಾವತಿ ಮೈದುಂಬಿಕೊಂಡು ಹರಿಯುತ್ತಿದೆ. ನದಿ ಪೂರ್ಣ ಭರ್ತಿಯಾಗಿದ್ದು ಭೊರ್ಗರೆಯುವ ದೃಶ್ಯ ನೋಡುಗರನ್ನು ಮೈ ನವಿರೇಳಿಸುವಂತಿದ್ದರೂ ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ. ಬೆಳಗ್ಗಿನ ವೇಳೆ ಏಳು ಮೀಟರ್ ಎತ್ತರಕ್ಕೆ ನೀರು ಹರಿದಿದ್ದು8 ಮೀಟರ್ ಅಪಾಯದ ಮಟ್ಟವಾಗಿದೆ.    

ಕಳೆದ ರಾತ್ರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಧಾರಾಕರವಾಗಿ ಮಳೆ ಸುರಿದಿರುವ ಹಿನ್ನಲೆಯಲ್ಲಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದರಿಂದಾಗಿ ಶಂಭೂರಿನ ಎಎಂಆರ್ ಡ್ಯಾಂನಲ್ಲಿ ನೀರನ್ನು ಹರಿಯ ಬಿಟ್ಟಿರುವುದರಿಂದ ನದಿ ತುಂಬಿ ಹರಿದಿದೆ. ನದಿ ತೀರದ ಹಳ್ಳಗಳಲ್ಲಿಯೂ ಸಾಕಷ್ಟು ನೀರು ತುಂಬಿಕೊಂಡುತಗ್ಗು ಪ್ರದೇಶಗಳನ್ನು ಆವರಿಸಿಕೊಂಡಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಆಲಡ್ಕ, ಕಂಚಿಕಾರ ಪೇಟೆ, ಬಡ್ಡಕಟ್ಟೆ, ಗೂಡಿನ ಬಳಿ, ನಂದಾವರ, ಪಾಣೆಮಂಗಲೂರು ಪ್ರದೇಶಗಳು ನದಿ ತೀರದಲ್ಲಿ ಇದ್ದು ನದಿಯಲ್ಲಿ 8 ಮೀಟರ್‌ಗಿಂದತ ಅಧಿಕ ನೀರು ಹರಿದು ಬಂದರೆ ಈ ಪ್ರದೇಶಗಳು ಮುಳುಗುವ ಭೀತಿಯೂ ಇದೆ. ಎಡೆಬಿಡದೆ ಸುರಿಯವ ಮಳೆಯಿಂದಾಗಿ ಪ್ರವಾಹ ಭೀತಿ ಜನರಲ್ಲಿ ಮೂಡಿದೆ.

Related posts

Leave a Reply