Header Ads
Header Ads
Breaking News

ಮೊಗವೀರ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ.

ಉಳ್ಳಾಲದ ಮಾರುತಿ ಯುವಕ ಮಂಡಲ ಮಾರುತಿ ಕ್ರಿಕೆಟರ್ಸ್ ವತಿಯಿಂದ ಮೊಗವೀರ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಪ್ರತಿಭಾ ಪುರಸ್ಕಾರ, ಹಾಗೂ ಗೌರವ ಧನ ಪ್ರದಾನ ಕಾರ್ಯಕ್ರಮ ಉಳ್ಳಾಲದ ಮೊಗವೀರ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನಿವೃತ್ತ ಯೋಧ ದಿನೇಶ್ ಕಾಜಾವ ಮತ್ತು ಸಮಾಜ ಸೇವಕ ರಾಝೀಕ್ ಉಳ್ಳಾಲ್ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ರಶೀದ್ ಮಾತನಾಡಿ ಉಳ್ಳಾಲ ಕೋಮುಸೂಕ್ಷ್ಮ ಪ್ರದೇಶ ಎಂಬ ಹೆಸರನ್ನು ಬದಲಿಸಿ ಸಾಮರಸ್ಯದ ಉಳ್ಳಾಲ ಎಂಬ ಹೆಸರು ತರಲು ಮಾರುತಿ ಯುವಕ ಮಂಡಲ ಇಂತಹ ಸಂಘ ಸಂಸಯ ಮುಂದಾದಾಗ ಸಾಮಾರಸ್ಯದ ಉಳ್ಳಾಲವಾಗಿ ಬದಲಾಗಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭ ಉತ್ತಮ ಅಂಗ ಪಡೆದ ೪೪ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾರುತಿ ಯುವಕ ಮಂಡಲ ರಾಜೋತ್ಸವ ಪ್ರಶಸ್ತಿ ಪಡೆದಿದೆ ಇದು ಉಳ್ಳಾಲಕ್ಕೆ ಹೆಮ್ಮೆ ತರುವ ವಿಚಾರ ಇದೇ ರೀತಿ ಎಲ್ಲಾ ಸಂಘ ಸಂಸ್ಥೆಗಳು ದುಡಿದಾಗ ನಮ್ಮ ಊರಿನ ಸಮಸ್ಯೆ ವನ್ನು ನಾವೆ ಪರಿಹರಿಸಬಹುದು ಎಂದು ಹೇಳಿದರು.ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಉದ್ಯಮಿಗಳಾದ ಲೋಕೇಶ್ ಉಳ್ಳಾಲ್, ಮೊಹಮ್ಮದ್ ಫಕೀರ್, ಮೊಗವೀರ ಪ್ರಾಥಮಿಕ ಶಾಲೆಯ ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್, ಮೊಗವೀರ ಶಾಲಾ ಮುಖ್ಯೋಪಾಧ್ಯಾಯಿನಿ ವೇದಾವತಿ ಟೀಚರ್, ಬಿಜೆಪಿ ಉಳ್ಳಾಲ ವಲಯ ಸದಸ್ಯೆ ಮಮತ ಉಪಸ್ಥಿತರದರು.

Related posts

Leave a Reply