Header Ads
Header Ads
Breaking News

ಮೊಡಲ್ ಯುನೈಟೆಡ್ ನೇಷನ್ ಸಾಪ್ಮುನ್-2019 : ಮೂರು ದಿನದ ಸೆಮಿನಾರ್ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜ್ ವತಿಯಿಂದ ಮೊಡಲ್ ಯುನೈಟೆಡ್ ನೇಷನ್ ಸಾಪ್ಮುನ್-2019 ಮೂರು ದಿನದ ಸೆಮಿನಾರ್ ಕಾರ್ಯಕ್ರಮದ ಉದ್ಘಾಟನೆಯು ಕಾಲೇಜಿನ ಲೋಯೋಲಾ ಸಭಾಂಗಣದಲ್ಲಿ ನಡೆಯಿತು.
 ಕಾರ್ಯಕ್ರಮವನ್ನು ಪಾರ್ ಇಕೋ ಸೊಲ್ಯುಶನ್‌ನ ಕೋ ಫೌಂಡರ್ ರಕ್ಷಿತ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂತ ಅಲೋಶಿಯಸ್ ಕಾಲೇಜ್ ಹಿಂದಿನಿಂದಲು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ ಎಂದ ಅವರು ಇಂತಹ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಆನಂತರ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ರೆವರೆಂಡ್ ಫಾದರ್ ಡೈನೀಶಿಯಸ್ ವಾಸ್ ಎಸ್.ಜೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಡಲ್ ಯುನೈಟೆಡ್ ನೇಷನ್ ಸಾಪ್ಮುನ್-2019 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಕಮ್ಯುನಿಕೇಶನ್ ಸ್ಕಿಲ್, ಕ್ರಿಯೇಟಿವಿಟಿ, ಕಲ್ಚರಲ್ ಲಿಟ್ರಸಿ, ಗ್ಲೋಬಲ್ ಔಟ್‌ಲುಕ್, ಟೀಮ್ ವರ್ಕ್, ಎಥಿಕಲ್ ರೀಸನಿಂಗ್ ಮುಂತಾದ ವಿಷಯಗಳ ಕುರಿತು ಸೆಮಿನಾರ್‌ಗಳು ನಡೆಯಲಿದೆ ಎಂದು ಹೇಳಿದರು.
ಕಾಲೇಜಿ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಕ್ಲಿಪರ್ಡ್ ಸೀಕ್ವೇರಾ ಎಸ್.ಜೆ ಅವರು, ಮೊಡಲ್ ಯುನೈಟೆಡ್ ನೇಷನ್ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಚರ್ಚಿಸಬೇಕಾದ ಅಗತ್ಯವಿದೆ. ಇದು ಕಲಿಯುವ ವಿದ್ಯಾರ್ಥಿಗಳಿಗೆ ಅಡಿಪಾಯ ಇದ್ದಂತೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಪರಿಸರದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅದನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇರುವುದರಿಂದ ವಿದ್ಯಾರ್ಥಿಗಳು ಈ ಬಗ್ಗೆ ತಿಳಿದುಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *