Header Ads
Breaking News

ಮೊದಲ ವರ್ಷಾಧಾರೆ : ಸಿಡಿಲು ಬಡಿದ ಪರಿಣಾಮ ಮನೆಗೆ ಹಾನಿ

ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಹಾನಿ ಉಂಟಾದ ಘಟನೆ ಇರಾ ಗ್ರಾಮದ ಕೆಂಜಿಲ ಎಂಬಲ್ಲಿ ನಡೆದಿದೆ. ಇಲ್ಲಿನ ರಾಧಮ್ಮ ಎಂಬವರ ಮನೆಗೆ ಇಂದು ಮುಂಜಾನೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದ್ದು, ಮನೆಯ ವೈರಿಂಗ್ ಸಂಪೂರ್ಣ ಸುಟ್ಟುಹೋಗಿದೆ. ಅದೃಷ್ಟವಶಾತ್ ಮನೆಯ ಸದಸ್ಯರು ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ತುಳಸಿ ಪೂಜಾರಿ, ಶೇಖರ ಪೂಜಾರಿ, ಸುಧಾಕರ ಕೆ.ಟಿ., ಗ್ರಾಮ ಕರಣೀಕರಾದ ತೌಫೀಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

Leave a Reply

Your email address will not be published. Required fields are marked *