
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅರಸೀಕೆರೆ ನಗರ ಠಾಣೆಯ ವೃತ್ತ ನಿರೀಕ್ಷಕ ಚಂದ್ರಶೇಖರಯ್ಯ ಅವರು ನಗರದ ರೈಲ್ವೇ ನಿಲ್ದಾಣದ ಪಾಳುಬಿದ್ದಿರುವ ಮನೆಯ ಹತ್ತಿರ ಒಂದು ಬೈಕ್ನ ನಂಬರ್ ಪ್ಲೇಟ್ನ್ನು ಕಲ್ಲಿನಿಂದ ಜಜ್ಜಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ ರಂಗ ಅಲಿಯಾಸ್ ಅಲಿಯಾಸ್ ರಂಗನಾಥ್ ಎಂಬಾತ ಬ್ಯಕ್ ಸಮೇತ ಸಿಕ್ಕಿಬಿದ್ದಿದ್ದ. ಮತ್ತೊಬ್ಬ ಆರೋಪಿ ಮಟ್ಟನವಿಲೆ ಮಂಜ ಎಂಬವನು ಪರಾರಿಯಾಗಿದ್ದಾನೆ. ಆರೋಪಿ ರಂಗನನ್ನು ವಿಚಾರಣೆ ಮಾಡಿದ ಕಳವು ಪ್ರಕರಣದ ಬಗ್ಗೆ ಬಾಯ್ಬಿಟಿದ್ದಾನೆ. ಅರಸೀಕೆರೆ ನಗರ ಪೊಲೀಸ್ಠಾಣೆಯ ಸರಹದ್ದಿನಲ್ಲಿ ಒಟ್ಟು 15 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಅರಸೀಕೆರೆ ಉಪವಿಭಾಗದ ಡಿವೈಎಸ್ಪಿ ನಾಗೇಶ್, ನಗರ ವೃತ್ತನಿರೀಕ್ಷಕ ಚಂದ್ರಶೇಖರಯ್ಯ, ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತಕುಮಾರ್ ಪಿಎಸ್ಐ ತಿಮ್ಮಯ್ಯ ಉಪಸ್ಥಿತರಿದ್ದರು.