Header Ads
Breaking News

ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ಮಾತ್ರ ದೇಶಕ್ಕೆ ಭವಿಷ್ಯ: ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಉಳ್ಳಾಲ: ಅಮೆರಿಕಾದಲ್ಲಿ ಕರ್ತವ್ಯ ನಿರ್ವಹಿಸುವವರು ಮತ ಚಲಾವಣೆಗೆ ಲಕ್ಷಾಂತರ ಖರ್ಚು ಮಾಡಿ ಭಾರತಕ್ಕೆ ಬರುತ್ತಾರೆ ಎಂದರೆ ಅದು ಮೋದಿ ಭಾರತದಿಂದ ಮಾತ್ರ ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬಿಜೆಪಿ ಮಂಗಳೂರು ಕ್ಷೇತ್ರದ ವತಿಯಿಂದ ತೊಕ್ಕೊಟ್ಟುವಿನಿಂದ ಕೋಟೆಕಾರುವರೆಗೆ ನಡೆಸಿದ ರೋಡ್ ಷೋನಲ್ಲಿ ಭಾಗವಹಿಸಿ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾದಲ್ಲಿ ಮಾತ್ರ ದೇಶಕ್ಕೆ ಭವಿಷ್ಯವಿದೆ. ಅಮೆರಿಕಾದ ಇಂಜಿನಿಯರ್ ಆಗಿರುವ ಯುವತಿ ಜಾಲತಾಣದ ಮೂಲಕ ಮೋದಿಗೆ ಮತ ಚಲಾಯಿಸಲು ದೇಶಕ್ಕೆ ಬರುವುದಾಗಿ ಹೇಳಿಕೊಂಡಿದ್ದಾಳೆ. ಇದು ಪ್ರಧಾನಿ ಮೋದಿ ಮೇಲೆ ಇಟ್ಟಿರುವ ಗೌರವ ಹಾಗೂ ಅವರ ಕಾರ್ಯವೈಖರಿ ಇಂತಹ ನಿಲುವಿಗೆ ಕಾರಣವಾಗಿದೆ. ಭಾರತೀಯರೆಂದರೆ ವಿಮಾನ ನಿಲ್ದಾಣಗಳಲ್ಲಿ ತಾತ್ಸಾರ ಭಾವನೆಗಳಿತ್ತು. ಆದರೆ ಕಳೆದ ಐದು ವರ್ಷಗಳಿಂದ ಭಾರತೀಯರಿಗೆ ವಿಶೇಷ ಗೌರವ ಸಿಗುವಂತಹ ಕೆಲಸವಾಗುತ್ತಿದೆ. ಮಹಾಘಟಬಂಧನದಲ್ಲಿ ಪ್ರಧಾನಿ ಆಗುವುದು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ ಎಂದರು.

ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಜಿಲ್ಲೆಯ ಅಭ್ಯರ್ಥಿ 3 ಲಕ್ಷ ಮತಗಳ ಅಂತರದಲ್ಲಿ ಈ ಬಾರಿ ಜಯಗಳಿಸಲಿದ್ದಾರೆ. ಜಗತ್ತೇ ಕೊಂಡಾಡುವಂತಹ ಪ್ರಧಾನಿ ದೇಶದಲ್ಲಿದ್ದಾರೆ. ಅವರು ಜಾರಿಗೆ ತಂದಿರುವ ಯೋಜನೆಗಳು ತಳಮಟ್ಟದ ಕಾರ್‍ಯಕರ್ತರಿಗೆ ತಲುಪಿದೆ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ದೇಶದಲ್ಲಿ ತಾಯಿ ಮಗನಿಗೋಸ್ಕರ ನಡೆಸುವ ಪಾರ್ಟಿ ಒಂದು, ಅಪ್ಪ-ಮಕ್ಕಳು ಕುಟುಂಬಸ್ಥರಿಗೆ ನಡೆಸುವ ಪಾರ್ಟಿ ಇನ್ನೊಂದು. ಅದೇ ದೇಶದ ಅಖಂಡತೆ, ಅಭಿವೃದ್ಧಿಗಾಗಿ ತ್ಯಾಗದ ಜೀವನವನ್ನು ನಡೆಸುತ್ತಿರುವ ಪ್ರಧಾನಿ ಮೋದಿಯವ ಪಕ್ಷಕ್ಕೆ ಜನ ಬೆಂಬಲಿಸಬೇಕಿದೆ ಎಂದರು.

ಈ ಸಂದರ್ಭ ಮುಖಂಡರುಗಳಾದ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಸತೀಶ್ ಕುಂಪಲ, ಚಂದ್ರಹಾಸ್ ಉಳ್ಳಾಲ್, ಕ್ಷೇತ್ರ ಚುನಾವಣಾ ಉಸ್ತುವಾರಿ ರಾಧಾಕೃಷ್ಣ ಬೂಡಿಯಾರು, ನಮಿತಾ ಶ್ಯಾಂ, ರಾಜ್ಯ ಕಾರ್‍ಯಕಾರಿಣಿ ಸಮಿತಿ ಸದ್ಯ ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಉಪಸ್ಥಿತರಿದ್ದರು..

Related posts

Leave a Reply

Your email address will not be published. Required fields are marked *