Header Ads
Breaking News

ಮೌಲಾನ ಆಜ್ಹಾದ್ ಆಂಗ್ಲ ಮಾಧ್ಯಮ ಶಾಲೆಗೆ ಕಾದಿರಿಸಲಾದ ಸ್ಥಳಕ್ಕೆ ವಿರೋಧ

ಪುತ್ತೂರು: ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಪುತ್ತೂರು ಮರೀಲ್ ಬೆದ್ರಾಳ ಮದ್ಯೆ ಬೆದ್ರಾಳ ಪ್ರದೇಶದಲ್ಲಿ ಮೌಲಾನ ಆಜ್ಹಾದ್ ಆಂಗ್ಲ ಮಾಧ್ಯಮ ಶಾಲೆಗೆ ಕಾದಿರಿಸಲಾದ ಸ್ಥಳಕ್ಕೆ ವಿರೋಧ ವ್ಯಕ್ತಪಡಿಸಿ ಪರಿಸರದ ಮಂದಿ ಬೆದ್ರಾಳದಲ್ಲಿ ಸಭೆ ನಡೆಸಿದ ಮತ್ತು ಈ ಪರಿಸರದಲ್ಲಿ ಸರಕಾರಿ ಆಂಗ್ಲಮಾದ್ಯಮ ಶಾಲೆಗೆ ಅನುದಾನ ಮಂಜೂರುಗೊಳಿಸಬೇಕೆಂದು ಆಗ್ರಹಿಸಿ ಶಾಸಕರಿಗೆ ಸ್ಥಳೀಯ ನಗರಸಭೆ ಸದಸ್ಯರ ಮೂಲಕ ಮನವಿ ನೀಡಿದ ಘಟನೆ ನಡೆದಿದೆ.

ಮೌಲನಾ ಅಜ್ಹಾದ್ ಶಾಲೆ ಯಾವ ಕಾರಣಕ್ಕೂ ಈ ಪರಿಸರದಲ್ಲಿ ಆಗಕೂಡದು ಬದಲಾಗಿ ಇಲ್ಲಿಗೆ ಸರಕಾರಿ ಆಂಗ್ಲಮಾದ್ಯಮ ಶಾಲೆಗೆ ಅವಕಾಶ ಮಾಡಿಕೊಡಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಪರಿಸದ ನಿವಾಸಿಗಳು ಆಗ್ರಹಿಸಿದರು. ಪರಿಸರದ ನಿವಾಸಿಗಳಾದ ಸೂರ್ಯ ಮರೀಲ್, ನವೀನ್ ನಾೈಕ್ ಸ್ನೇಹನಗರ, ಪದ್ಮನಾಭ ಬೆದ್ರಾಳ, ಶ್ಯಾಮಸುಂದರ, ಚಂದ್ರ ಬೆದ್ರಾಳ, ಗಣೇಶ್, ಹರೀಶ್ ಬೆದ್ರಾಳ, ದಿನೇಶ್ ಬೆದ್ರಾಳ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಈ ಪರಿಸರದಲ್ಲಿ ಮೌಲಾನಾ ಆಜ್ಹಾದ್ ಶಾಲೆಗೆ ವಿರೋಧ ವ್ಯಕ್ತಪಡಿಸಿದರು.ಅಭಿಪ್ರಾಯವನ್ನು ಶಾಸಕರಿಗೆ ಮನವರಿಕೆ ಮಾಡುತ್ತೇವೆ ಎಂದರು.
ನಗರಸಭಾ ಸದಸ್ಯ ಬಾಲಚಂದ್ರ ಅವರು ಮಾತನಾಡಿ ಇಲ್ಲೊಂದು ಪ್ರತ್ಯೇಕ ಅಲ್ಪಸಂಖ್ಯಾತ ಸಮುದಾಯಕ್ಕೆ ಶಾಲೆ ನಿರ್ಮಾಣ ಆಗುತ್ತಿರುವ ಕುರಿತು ಪರಿಸರದ ಮಂದಿಯಲ್ಲಿ ಆಕ್ಷೇಪವಿದೆ. ಕೇಂದ್ರ ಸರಕಾರದ ಯೋಜನೆಯಂತೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಯೋಜನೆ ಜಾರಿ ಆಗಿತ್ತು. ಆದರೆ ಪರಿಸರದ ಜನರ ಆಕ್ಷೇಪ ಇರುವ ಹಿನ್ನೆಲೆಯಲ್ಲಿ ತಮ್ಮೆಲ್ಲರ ಅಭಿಪ್ರಾಯವನ್ನು ಶಾಸಕರ ಮುಂದಿಟ್ಟು ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ ಪುತ್ತಿಲ ಅವರು ಮಾತನಾಡಿ ಈ ಭಾಗದಲ್ಲಿ ಮುಸಲ್ಮಾನರ ಶಾಲೆ ಆಗಬಾರದು ಎಂಬ ಅಭಿಪ್ರಾಯ ಇದೆ. ಖಂಡಿತವಾಗಿಯೂ ತಮ್ಮ ಬೇಡಿಕೆಗೆ ಶಾಸಕರು ಒಪ್ಪಿಗೆ ಕೊಡುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ ಅವರು ಸಾರ್ವಜನಿಕ ವಿರೋಧದ ನಡುವೆ ಯಾವುದೇ ಕಾರ್ಯಕ್ರಮ ನಡೆಸುವುದು ಅಥವಾ ನಿಲ್ಲಿಸುವುದು ಒಂದಷ್ಟು ಸಂಘರ್ಷಕ್ಕೆ ಹಾದಿಯಾಗುತ್ತದೆ ಮತ್ತು ಶಾಶ್ವತ ಭಿನ್ನತೆಗೆ ಎಡೆ ಮಾಡಿಕೊಡುತ್ತದೆ. ಈ ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಬೆಳವಣಿಗೆ ಆಗದಿರಲಿ ಮತ್ತು ನಾವೆಲ್ಲರು ಸಂತೊಷದಿಂದ ಪ್ರೀತಿ ವಿಶ್ವಾಸದ ಜೊತೆಗೆ ಹಿಂದೂ ಸಮಾಜದಲ್ಲಿ ಬದುಕುವ ಸಂಕಲ್ಪ ಮಾಡೋಣ ಎಂದರು.

ಈ ಸಂದರ್ಭ ಪರಿಸರದ ಮಂದಿ ಶಾಲೆಗೆ ಆಕ್ಷೇಪದ ಕುರಿತು ಶಾಸಕರಿಗೆ ಮನವರಿಕೆ ಮಾಡುವಂತೆ ಸ್ಥಳೀಯ ನಗರಸಭಾ ಸದಸ್ಯರಾದ ರೋಹಿಣಿ ಪೂಜಾರಿ ಅವರಿಗೆ ನೀಡಿದರು. ವೇದಿಕೆಯಲ್ಲಿ ಹಿಂದೂಜಾಗರಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಅವಿನಾಶ್, ಮಾತೃ ಸುರಕ್ಷಾ ಪ್ರಮುಖ್ ಸ್ವಸ್ತಿಕ್ ಮೇಗಿನಗುತ್ತು, ಪುಷ್ಪರಾಜ್ ಮತ್ತಿರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *