Header Ads
Header Ads
Breaking News

ಯಜಮಾನನ ಅಂತ್ಯಕ್ರಿಯೆಗೆ ಅಸಹಾಯಕರಾದ ಪತ್ನಿ ಮತ್ತು ಪುಟ್ಟ ಮಕ್ಕಳು : ಅಂತ್ಯಕ್ರಿಯೆ ನಡೆಸಿಕೊಟ್ಟ ಸಮಾಜಸೇವಕ ವಿಶುಶೆಟ್ಟಿ

ಉಡುಪಿ: ಅನಾರೋಗ್ಯದಿಂದ ಮೃತಪಟ್ಟ ನಾವುಂದದ ಪ್ರಕಾಶ್ ಖಾರ್ವಿ(35ವರ್ಷ)ಯವರ ಅಂತ್ಯಕ್ರಿಯೆ ನಡೆಸಲು ಪತ್ನಿ ತನ್ನ ಎರಡು ಮಕ್ಕಳೊಂದಿಗೆ ಅಸಹಾಯಕಳಾಗಿ ದುಃಖಿಸಿದಾಗ, ವಿಶುಶೆಟ್ಟಿ ಅಂಬಲಪಾಡಿಯವರು ತಾನೆ ಮುಂದೆ ನಿಂತು ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ.

ನಾವುಂದದ ಕೂಲಿ ಕಾರ್ಮಿಕ ಪ್ರಕಾಶ್ ಖಾರ್ವಿ ಅನಾರೋಗ್ಯಕ್ಕಿಡಾಗಿ ಎರಡು ತಿಂಗಳಿನಿಂದ ಜಲ್ಲಾಸ್ಪತ್ರೆಯಲ್ಲಿದ್ದರು. ಅವರು ಜುಲೈ 15 ರಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದರು. ಅಂತ್ಯಕ್ರಿಯೆ ನಡೆಸಲು ತೀವ್ರ ಬಡತನದ ಪತ್ನಿ ಅಸಹಾಯಕಳಾದಾಗ ಶವವನ್ನು ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಯಿತು. ಪತ್ನಿ ಗೀತಾ ಕೂಲಿ ಕೆಲಸ ಮಾಡಿಕೊಂಡು ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಗಂಡನು ಹಲವು ಸಮಯಗಳಿಂದ ಅನಾರೋಗ್ಯಪೀಡಿತನಾಗಿದುದ್ದರಿಂದ ಆತನ ದುಡಿಮೆಯು ಇರಲಿಲ್ಲ. ಹೀಗಾಗಿ ಗೀತಾ ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಜುಲೈ೧೬ ರಂದು ವಿಶುಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ವಿಷಯದ ಗಂಭಿರತೆಯನ್ನು ಅರಿತ ವಿಶುಶೆಟ್ಟಿಯವರು ಮೃತ ದೇಹವನ್ನು ಜಿಲ್ಲಾಸ್ಪತ್ರೆಯಿಂದ ಪಡೆದು ತಾನೆ ಮುಂದೆ ನಿಂತು, ಎಲ್ಲಾ ಖರ್ಚುಗಳನ್ನು ಬರಿಸಿ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *