Header Ads
Breaking News

ಯಾವುದೇ ಕಾರಣಕ್ಕೂ ಬೀಚ್‍ಗಳಲ್ಲಿ ತಡರಾತ್ರಿ ಕಾರ್ಯಾಚರಣೆ ನಿಲ್ಲಲ್ಲ : ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

ಮಂಗಳೂರಿನ ಬೀಚ್‌ಗಳಲ್ಲಿ ನಡೆಸಿದ ತಡರಾತ್ರಿ ಕಾರ್ಯಾಚರಣೆ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದವು. ಆದರೆ ಅಂತಹ ಆಕ್ಷೇಪಗಳಿಗೆ ಸ್ಪಷ್ಟನೆ ನೀಡುತ್ತೇವೆಯೇ ಹೊರತು ಕಾರ್ಯಾಚರಣೆ ಸ್ಥಗಿತಗೊಳಿಸಿವ ಪ್ರಶ್ನೆಯೇ ಇಲ್ಲ ಅಂತಾ ನೂತನ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ’ಮಾಧ್ಯಮ ಸಂವಾದ’ ದಲ್ಲಿ ಮಾತನಾಡಿದ ಅವರು, ರಾತ್ರಿ ಹೊತ್ತಲ್ಲಿ ಸಾರ್ವಜನಿಕ ಸ್ಥಳವಾಗಿರುವ ಬೀಚ್‌ಗಳಲ್ಲಿ ಮದ್ಯಪಾನ ಮಾಡೋದು ಮತ್ತು ಯುವಕ-ಯುವತಿಯರು ತಡರಾತ್ರಿಯಲ್ಲಿ ಒಬ್ಬೊಬ್ಬರಾಗಿ ಕೂತ್ಕೊಳ್ಳೋದು ಎಷ್ಟು ಸರಿ?.. ಯುವಕ-ಯುವತಿಯರು ಒಬ್ಬೊಬ್ಬರಾಗಿ ಬೀಚ್ ಗಳಲ್ಲಿ ಕೂತ ಸಂದರ್ಭ ಅವರಿಗೆ ಕಿಡಿಗೇಡಿಗಳಿಂದ ತೊಂದರೆ ಆದರೆ ಇಡೀ ಮಂಗಳೂರು ತಲೆತಗ್ಗಿಸು ಘಟನೆ ನಡೆದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯಬಾರದೆನ್ನುವ ಉದ್ದೇಶದಿಂದಷ್ಟೇ ಬೀಚ್ ಗಳಲ್ಲಿ ತಡರಾತ್ರಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದೇವೆ ಎಂದರು. ಇನ್ನು ಪೊಲೀಸರ ಮೇಲೆ ಹಲ್ಲೆ ನಡೆಸುವ ಯಾವುದೇ ಕಿಡಿಗೇಡಿಗಳಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳೋದಾಗಿ ಎಚ್ಚರಿಸಿದರು.

Related posts

Leave a Reply

Your email address will not be published. Required fields are marked *