Header Ads
Breaking News

ಯುವ ಸಮೂಹ ಮಾದಕ ದ್ರವ್ಯಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡುತ್ತಿದೆ : ಶಾಸಕ ವೇದವ್ಯಾಸ್ ಕಾಮತ್ ಹೇಳಿಕೆ

ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡಂತ ಅನೇಕ ಪೋಷಕರ ಕನಸನ್ನ ಮಾದಕ ದ್ರವ್ಯ ಜಾಲ ಕಸಿದುಕೊಳ್ತಾ ಇದೆ. ಯುವ ಸಮೂಹವು ಡ್ರಗ್ಸ್ ಜಾಲ ಮುಂತಾದ ಮಾದಕ ದ್ರವ್ಯಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡ್ತಾ ಇದೆ. ಇದನ್ನೆಲ್ಲಾ ಮಟ್ಟ ಹಾಕುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು ಅಂತ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಶಾಸಕನಾಗಿ ನಾನು ಮಂಗಳೂರಿನ ಪೊಲೀಸ್ ಇಲಾಖೆಗೆ ಜಿಲ್ಲಾಡಳಿತಕ್ಕೆ ಮಾದಕ ದ್ರವ್ಯ ಜಾಲದ ಎಲ್ಲಾ ವಿಷಯವನ್ನು ಬುಡದಿಂದಲೇ ಕಿತ್ತಿ ಹಾಕಬೇಕು ಅನ್ನುವಂತಹ ಸೂಚನೆಯನ್ನು ನೀಡಿದ್ದೇನೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕವನ್ನಾಗಿ ಮಾಡೋದು ಕರ್ನಾಟಕ ಸರ್ಕಾರದ ಬಹು ದೊಡ್ಡ ಜವಾಬ್ದಾರಿಯಾಗಿದೆ. ಮತ್ತು ಇದಕ್ಕೆ ಸರಕಾರ ಕೂಡಾ ಬದ್ಧವಾಗಿದೆ. ಮಾದಕ ದ್ರವ್ಯ ಜಾಲದ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ… ಅಥವಾ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ನಮ್ಮೊಂದಿಗೆ ಸಹಕರಿಸಿ ಅಂತ ಹೇಳಿದ್ರು. ಡ್ರಗ್ಸ್ ಮುಕ್ತ ಭಾರತಕ್ಕಾಗಿ ಎಲ್ಲರೂ ಮುಂದಾಗಿ ಹೋರಾಡೋಣ ಅಂತ ವೇದವ್ಯಾಸ್ ಕಾಮತ್ ಹೇಳಿದ್ರು.

Related posts

Leave a Reply

Your email address will not be published. Required fields are marked *