
ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರುಗಳ ತಂಡದಿಂದ ನಾಲ್ಕು ವರ್ಷದ ಬಾಲಕನ ಕಾಲಿನ ತೊಡೆಯಲ್ಲಿ ಕ್ಯಾನ್ಸರ್ ಬಾದಿತ ಎಲುಬಿನ ಅಸ್ಥಿಮಜ್ಜೆಯ ಕ್ಯಾನ್ಸರಿನ , ಅಪರೂಪದ ಯಶಸ್ವಿ ಶಸ್ತ್ರಕ್ರಿಯೆಯನ್ನು ನಡೆಸಲಾಗಿದೆ.
ಈ ಬಗ್ಗೆ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕ್ಯಾನ್ಸರ್ ತಜ್ಞ ಡಾ. ಜಲಾಲುದ್ದೀನ್ ಮಾತನಾಡಿ ಇದೊಂದು ಅಪರೂಪದ ಹಾಗೂ ಸಣ್ಣ ಮಕ್ಕಳಿಗೆ ಈ ರೀತಿಯ ಶಸ್ತ್ರಕ್ರಿಯೆಯನ್ನು ನಡೆಸಿರುವುದು ಅಂಕಿಅಂಶಗಳ ಆಧಾರದಲ್ಲಿ ಭಾರತದಲ್ಲಿಯೇ ಪ್ರಥಮವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಗುವಿನ ಕುಟುಂಬದವರು ಭಾರತದಾದ್ಯಂತ ಹಲವು ಪರಿಣಿತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂದರ್ಶಿಸಿದಾಗ ಕ್ಯಾನ್ಸರ್ ಭಾದಿತ ಕಾಲಿನ ಭಾಗವನ್ನು ತುಂಡರಿಸುವುದು ಒಂದೇ ಪರಿಹಾರ ಎಂದು ತಿಳಿಸಿದಾಗ ಗಲಿಬಿಲಿಗೊಳಗಾದ ಕುಟುಂಬ ಸದಸ್ಯರು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಯ ವಿಭಾಗದ ಮುಖ್ಯಸ್ಥ ಜಲಾಲುದ್ದೀನ್ ಅವರನ್ನು ಭೇಟಿ ಮಾಡಿದಾಗ ಅವರು ಇಂತಹ ಅನೇಕ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವಂತಹ ಪ್ರಸ್ತುತ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉಪವಕುಲಪತಿ ಡಾ. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ , ಇದನ್ನೊಂದು ಸವಾಲಾಗಿ ಸ್ವೀಕರಿಸಿ ಅವರ ಸಲಹೆಯಂತೆ ಕಾಲು ಕತ್ತರಿಸದೆಯೇ ಚಿಕಿತ್ಸೆ ನೀಡಲು ಸಾಧ್ಯವೆಂದು ತಿಳಿಸಿದ್ದಾರೆ. ಅದರಂತೆ ಅದಕ್ಕಾಗಿ ತಗಲುವ ಲೋಹದ ಇಂಪ್ಲಾಟ್ ನ್ನು ತಯಾರಿಸುವ ಹಲವು ಕಂಪೆನಿಗಳೊಂದಿಗೆ ವಿಚಾರಿಸಿ ಜರ್ಮನಿಯ ಕಂಪನಿಯೊಂದು 30ಲಕ್ಷ ರೂ. ಹಾಗೂ ಚೆನ್ನೈಯ ಕಂಪೆನಿಯೊಂದು ಅದನ್ನು ಲಕ್ಷಗಳಿಗೆ ಒದಗಿಸಿ ಕೊಡಬಹುದೆಂದು ತಿಳಿಸಿದಾಗ ಆಸ್ಪತ್ರೆಯ ಟ್ಯೂಮರ್ ಬೋರ್ಡಿನೊಂದಿಗೆ ಸಮಾಲೋಚನೆ ನಡೆಸಿ ಈ ಸಂಕೀರ್ಣ ಶಸ್ತ್ರಕ್ರಿಯೆಯನ್ನು 1.5 ಲಕ್ಷ ವೆಚ್ಚದಲ್ಲಿ ಸತತ 6 ಗಂಟೆಗಳ ಕಾಲ ಶಸ್ತ್ರಕ್ರಿಯೆಯನ್ನು ನಿರ್ವಹಿಸಿ ಮಗುವಿನ ಕಾಲು ಮತ್ತು ಜೀವವನ್ನು ರಕ್ಷಿಸಲು ಶ್ರಮಿಸಿ ಯಶಸ್ವಿಯಾಗಿದ್ದೇವೆ ಎಂದರು.ಇಂತಹ ಶಸ್ತ್ರಕ್ರಿಯೆಯು ಅಪರೂಪ ಮತ್ತು ಸವಾಲಿನಿಂದ ಕೂಡಿದ್ದು ಶಸ್ತ್ರಕ್ರಿಯೆಯನ್ನು ನಡೆಸಿದಾಗ ಎರಡೂ ಕಾಲುಗಳ ಸಮತೋಲನವನ್ನು ಕಾಪಾಡುವಂತೆ ಮುಂದಿನ ಜೀವಿತಾವಧಿಯಲ್ಲಿ ಯಾವುದೇ ಅಹಿತಕರ ಸನ್ನಿವೇಶಗಳಾಗದಂತೆ ಮುನ್ನೆಚ್ಚರಿಕೆ ವಹಿಸಿವುದು ಅಗತ್ಯ. ಈ ತರಹದ ಕ್ಯಾನ್ಸರ್ ಪೀಡಿತ ಕಾಲಿನ ಅಂಗ ನ್ಯೂನತೆ ಸರಿಪಡಿಸುವ ಶಸ್ತ್ರ ಚಿಕಿತ್ಸೆ ನಡೆಸಿರುವುದು ದುಬಾರಿಯೊಂದಿಗೆ ಬಹಳ ವಿರಳ ಹಾಗೂ ಇನ್ನಷ್ಟು ಸಣ್ಣ ವಯಸ್ಸಿನ ಮಗುವಿನ ಕಾಲು ಕತ್ತರಿಸಿ ಚಿಕಿತ್ಸೆ ನೀಡುವ ಬದಲು ಈ ನಮೂನೆಯ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿನ ಜೀವ ಕಾಪಾಡುವುದು ಅತ್ಯಂತ ಪರಿಣಿತ ವೈದ್ಯರುಗಳ ತಂಡದಿಂದ ಮಾತ್ರ ಸಾಧ್ಯ. ಇದು ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜು ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ನಡೆದಿರುವುದು ಹೆಮ್ಮೆಯ ವಿಷಯ ಎಂದರು.
ಸಾಮಾನ್ಯವಾಗಿ ಇಂತಹ ಕ್ಯಾನ್ಸರ್ ರೋಗ ಭಾದಿತ ಚಿಕಿತ್ಸೆಗಳನ್ನು ಕಾಲುಗಳನ್ನು ಕತ್ತರಿಸಿಯೇ ಪರಿಹಾರ ನೀಡುವುದರಿಂದ ಭಾರತದಲ್ಲಿ ಈ ರೀತಿ ರೋಗಭಾದಿತ ಅಂಗಗಳನ್ನು ತುಂಡರಿಸದೆ ಪರಿಣಿತ ವೈದ್ಯರು ಮತ್ತು ಆಧುನಿಕ ವೈದ್ಯಕೀಯ ಪರಿಕರ ಮತ್ತು ಉಪಕರಣಗಳಿಂದ ನೆರವೇರಿಸಿರುವುದು ಯೆನೆಪೋಯ ವಿಶ್ವವಿದ್ಯಾಲಯದಲ್ಲಿರುವ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರುಗಳ ಸಾಧನೆಯಾಗಿರುತ್ತದೆ.
ಡಾ. ವಿಜಯ ಕುಮಾರ್
ಉಪ ಕುಲಪತಿ
ಯೆನೆಪೋಯ ವಿಶ್ವವಿದ್ಯಾಲಯ
ಈ ಅಪರೂಪದ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ಯೆನೆಪೋಯ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಡಾ.ರೋಹನ್ ಶೆಟ್ಟಿ , ಡಾ.ಅಮರ್ ರಾವ್ , ಡಾ. ನೂರ್ ಮೊಹಮ್ಮದ್ ಆರ್ಥೋಪೆಡಿಕ್ಸ್ ವಿಭಾಗ ಮುಖ್ಯಸ್ಥ ಡಾ , ಇಮ್ತಿಯಾಜ್ ಅಹ್ಮದ್ , ಡಾ. ಅಭಿಷೇಕ್ ಶೆಟ್ಟಿ , ಅರಿವಳಿಕೆ ವಿಭಾಗದ ಡಾ. ಏಜಾಝ್ , ಮಕ್ಕಳ ತಜ್ಞರ ಡಾ. ಮಿಥುನ್ ಪಾಲ್ಗೊಂಡಿದ್ದರು.