Breaking News

ಯೇನೆಪೋಯ ಆಸ್ಪತ್ರೆಯಲ್ಲಿ ೩ ಟೆಸ್ಲಾ ಎಂಆರ್‌ಐ ಕ್ಯಾಥ್‌ಲ್ಯಾಬ್ ಸೌಲಭ್ಯಗಳ ಉದ್ಘಾಟನೆ

ಕೇಂದ್ರ ಸರ್ಕಾರದ ಆಯುಷ್ ಖಾತೆಯ ರಾಜ್ಯಮಂತ್ರಿ ಶ್ರೀಪಾದ ಯೆಸ್ಸೊ ನಾಯಕ್ ರವರು ಆಗಸ್ಟ್ ೧೩ರಂದು ದೇರಳಕಟ್ಟೆಯು ಯೆನೆಪೊಯಾ ವಿಶ್ವಾವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದು, ಆಸ್ಪತ್ರೆಯ ಸಂಕೀರ್ಣದಲ್ಲಿ ನೂತನವಾಗಿ ಅಳವಡಿಸಿದ ೩ ಟೆಸ್ಲಾ ಎಂಆರ್‌ಐ ಹಾಗೂ ಕ್ಯಾಥ್‌ಲ್ಯಾಬ್ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ ಎಂದು ಡಾ. ಶ್ರೀ ಕುಮಾರ್ ಮೆನನ್ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು.ಯೆನೆಪೋಯ ವಿಶ್ವ ವಿದ್ಯಾನಿಲ್ಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿಯವರು ಸಮಾರಂಭ ಅಧ್ಯಕ್ಷತೆ ವಹಿಸಲಿರುವರು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಡಾ. ದೇವದಾಸ್, ಡಾ. ಮಹಮ್ಮದ್ ಆಮೀನ್ ವಾಲಿ, ಡಾ. ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply