Header Ads
Header Ads
Breaking News

ಯೋಗರತ್ನ ತನುಶ್ರೀ ಪಿತ್ರೋಡಿಯವರ ’ನನ್ನ ಕನಸು’ ಪ್ರತಿಭಾ ಪ್ರದರ್ಶನ

ಸಂಧ್ಯೋದಯ ಪಿತ್ರೋಡಿ ಇವರು ಅರ್ಪಿಸುವ ತನುಶ್ರೀ ಪಿತ್ರೋಡಿ ಇವರ ಗಿನ್ನೀಸ್ ದಾಖಲೆ ಪ್ರಶಸ್ತಿ ಸ್ವೀಕಾರ ಸಮಾರಂಭ ಹಾಗೂ ತನುಶ್ರೀ ಪ್ರತಿಭಾ ಪ್ರದರ್ಶನ ಮತ್ತು ಬಾಸುಮ ಕೊಡಗು ರವರು ರಚಿಸಿ ನಿರ್ದೇಶಿಸಿ ವಿನ್ಯಾಸ ಮಾಡಿರುವ ಏಕವ್ಯಕ್ತಿ ಪ್ರದರ್ಶನ ಸೆ.೮ರಂದು ಬ್ರಹ್ಮಗಿರಿಯ ಸಂತ ಸಿಸಿಲೀಸ್ ಪ್ರೌಡಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉದಯಕುಮಾರ್ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಾತನಯ ಮುದ್ರಾಡಿ, ನರೇಂದ್ರ ಕಾಮತ್ ,ಜಯಕರ್ ಶೆಟ್ಟಿ ಇಂದ್ರಾಳಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿ ಬಾಸುಮ ಕೊಡಗು, ಕಾರ್ಯಕ್ರಮವು ಅಪರಾಹ್ನ ೨ರಿಂದ ಪ್ರಾರಂಭಗೊಂಡು ಸಾಯಂಕಾಲ7ರವರೆಗೆ ನಡೆಯಲಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೆ ದಿನ ತನುಶ್ರೀ ಸಾಧನೆಗಳ ಬಿತ್ತಿಚಿತ್ರ ಪ್ರದರ್ಶನ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಅಪರಾಹ್ನ 3.30ರಿಂದ ಪ್ರತಿಭಾ ಪ್ರದರ್ಶನ ಹಾಗೂ ಮಕ್ಕಳು ಮತ್ತು ಪೋಷಕರಿಗೆ ಏಕ್ ಮಿನಿಟ್ ಸ್ಪರ್ಧೆಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತನುಶ್ರೀ ಪಿತ್ರೋಡಿ, ವಿಜಯ ಕೋಟ್ಯಾನ್ ಪಿತ್ರೋಡಿ, ರಾಘವೇಂದ್ರ ದೇವಾಡಿಗ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *