Header Ads
Header Ads
Breaking News

ಅ.30 ಮತ್ತು 31 ರಂದು ರಂಗಸ್ಪಂದನ (ರಿ)ಮಂಗಳೂರು ಸಾಂಸ್ಕೃತಿಕ ರಂಗತೇರು ಕಾರ್ಯಕ್ರಮ

ಕಳೆದ 19 ವರ್ಷಗಳಿಂದ ರಂಗಸ್ಪಂದನ ಮಂಗಳೂರು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯು ರಂಗ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ, ಈ ಬಾರಿಯು ಅನೇಕ ಕಲಾ ಪ್ರಕಾರಗಳನ್ನು ಒಳಗೊಂಡ ಸಾಂಸ್ಕೃತಿಕ ರಂಗತೇರು ಕಾರ್ಯಕ್ರಮವು ನಡೆಯಲಿದೆ ಎಂದು ರಂಗಸ್ಪಂದನ ಮಂಗಳೂರು ಇದರ ಸಂಚಾಲಕರಾದ ವಿ.ಜಿ ಪಾಲ್ ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಸ್ಪಂದನ ಮಂಗಳೂರು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯು ಸಾಂಸ್ಕೃತಿಕ ರಂಗತೇರು ಎಂಬ ಪ್ರಧಾನ ಶೀರ್ಷಿಕೆಯ ಪರಿಕಲ್ಪನೆಯೋಂದಿಗೆ ಅ.30 ಮತ್ತು 31 ರಂದು ತರಬೇತಿ ಕೇಂದ್ರವನ್ನು ಶಿಕ್ಷಣ ಸಂಸ್ಥೆಯಲ್ಲಿ ಅಯೋಜಿಸಲಾಗಿದೆ ಎಂದರು. 30 ರಂದು ಚೆಂಡೆ ಮದ್ದಳೆ ಝೇಂಕಾರ ಯಕ್ಷಸಾಕ್ಷಾತ್ಕಾರ ಕಾರ್ಯಕ್ರಮವು ಮೇರಿಹಿಲ್‌ನ ಶ್ರೀ ನಾರಾಯಣ ಗುರು ಸೇವಾ ಸಂಘ, ಗುರುನಗರದಲ್ಲಿ ನಡೆಯಲಿದ್ದು ಯಕ್ಷಗಾನ ರಂಗನಿರ್ದೇಶಕ ಡಾ. ದಿನಕರ ಎಸ್ ಪಚ್ಚನಾಡಿ ನಿರ್ದೇಶನದಲ್ಲಿ ಮಹಿಳಾ ಬಳಗದವರಿಂದ ವಧು ಮೈಶಾಲಿನಿ ತಾಳಮದ್ದಳೆ ನಡೆಯಲಿದೆ ಎಂದರು. ಇನ್ನೂ 31ರಂದು ಕೋಂಚಾಡಿ ಎಜುಕೇಷನಲ್ ಟ್ರಸ್ಟ್ ಬೋರ್ಡ್ ಆಶ್ರಯದಲ್ಲಿ ಶ್ರೀ ರಾಮಶ್ರಮ ಅನುದಾನಿತ ಶಾಲೆಯಲ್ಲಿ ಟ್ರಸ್ಟ್‌ನ ಸಂಚಲಕರಾದ ಡಾ. ಎನ್.ವಿ ಕಿಶೋರ್ ಕುಮಾರ್ ರಂಗಜ್ಯೋತಿ ಪ್ರಜ್ವಲಿಸಿ ಸಮಾರೋಪ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದರೆ ಎಂದರು.ಬಳಿಕ ಖ್ಯಾತ ಸಂಗೀತ ನಿರ್ದೇಶಕ ಶ್ರೀ ಮುರಳೀಧರ ಕಾಮತ್ ಸಾರಥ್ಯದಲ್ಲಿ ಕನ್ನಡ, ತುಳು, ಕೊಂಕಣಿ ಭಾಷಾ ದಾಸ ಕೀರ್ತನೆ, ಭಾವಗೀತೆ, ಜಾನಪದ ಕುಣಿತ, ಹಾಡು ಹಾಗೂ ಶ್ರೀರಾಮಾಶ್ರಮ ಶಿಕ್ಷಣ ಸಂಸ್ಥೆಗಳ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಶ್ರೀ ಮುರಳೀಧರ ಕಾಮತ್, ಯಕ್ಷಗಾನ ರಂಗನಿರ್ದೇಶಕ ಡಾ. ದಿನಕರ ಎಸ್ ಪಚ್ಚನಾಡಿ, ರಂಗಸ್ಪಂದನ ಮಂಗಳೂರಿನ ಕಾರ್ಯದರ್ಶಿ ಸಚಿನ್ ಪಾಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *